Hindi Translationवचन में जागृत रहकर
आचरण में चूक जाओ,
तो करस्थललिंग घटसर्प होगा।
कहना कठिन है, करना कठिन है,
लिंगदेव ही प्रमाण है, महाशय।
जैसे निर्धन का कोप उसके
जबडे के लिए मृत्यु है,
वैसे कोई पार नहीं पाता, कूडलसंगमदेव ॥
Translated by: Banakara K Gowdappa
English Translation Alert in word if you play false in deed,
The Liṅga that you hold
Is like a monstrous snake!
You cannot talk or act
But God is your ordeal, good Sir!
Mark you, Kūḍala Saṅgama Lord,
One cannot get anywhere,
Even as a poor man's rage
That ruins his own jaws!
Translated by: L M A Menezes, S M Angadi
Tamil Translationஅழகுற உரைத்து, நடையில் தவறினால்
இலிங்கம், குடப்பாம்பனைய பிடித்திடுவான்
கூறவும் இயலாது, நடக்கவும் இயலாது
இலிங்கதேவனே சிறந்தவனையனே
ஏழையின் சினம் கன்னத்திற்கு அழிவாவதனைய
இறுதியில் தாண்டாது காணாய் கூடல சங்கமதேவனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನನಡೆ-ನುಡಿ ಒಂದಾಗಿರಬೇಕು
ಕಲ್ಯಾಣದಲ್ಲಿ ಬಸವಣ್ಣನವರ ದಿವ್ಯ ನೇತೃತ್ವದಲ್ಲಿ ನಿರ್ಮಿತವಾದ ಅನುಭವಮಂಟಪ ನುಡಿಗೆ ಎಷ್ಟೊಂದು ಪ್ರಾಧಾನ್ಯವನ್ನಿತ್ತಿತ್ತೋ ಅಷ್ಟೆ ಪ್ರಾಧಾನ್ಯವನ್ನು ನಡೆಗೂ ಕೊಟ್ಟಿತ್ತು. ಅದು ಕೇವಲ ಮಾತಿನ ಮಂಟಪವಾಗಿರಲಿಲ್ಲ. ಮಾತನ್ನು ಕೃತಿಗಿಳಿಸುವ ಮಹಾ ಮಂಟಪವಾಗಿತ್ತು. ಆದ್ದರಿಂದಲೇ ಜಾತಿ-ವಯ-ಲಿಂಗಾತೀತವಾಗಿ ಅಲ್ಲಿ ಸೇರಿದ್ದ ಶರಣ ಶರಣೆಯರು ನಡೆನುಡಿಗಳೊಳಗೊಂದಾಗಿದ್ದರು.
ತದ್ವಿರುದ್ಧವಾಗಿ, ನೀತಿ-ನಿಯಮಗಳನ್ನು ವಿಧಿಸುವ ಇಂದಿನ ಮುಖಂಡರು ‘ಅವು ಇರುವುದು ಸಾಮಾನ್ಯ ಜನರಿಗಾಗಿ, ಅವುಗಳನ್ನು ಪಾಲಿಸಬೇಕಾದವರೂ ಅವರೇ, ನಾವಲ್ಲ; ನಾವಿರುವುದು ಅವುಗಳನ್ನು ಉಪದೇಶಿಸುವುದಕ್ಕೆ ಮಾತ್ರ’ ಎಂದು ತಿಳಿಯುತ್ತಾರೆ. ಆದರೆ ಒಬ್ಬ ಶ್ರೀಸಾಮಾನ್ಯನೇ ಆಗಲಿ, ಅಥವಾ ಅಸಮಾನ್ಯ ಶ್ರೀಯೇ ಆಗಲಿ ನೀತಿ ನಿಯಮಗಳೆಂದರೆ ಎಲ್ಲರಿಗೂ ಒಂದೇ. ಹಾಗಿರದೆ ಸಾಮಾನ್ಯನಿಗೇ ಒಂದು, ಮುಖಂಡನಿಗೇ ಒಂದು ಆದರೆ, ಅದು ನೀತಿನಿಯಮಗಳ ನೀತಿಗೇ ವಿರುದ್ಧ. ನುಡಿಯಲ್ಲಿ ಎಚ್ಚರವಹಿಸಿ ನಡೆಯಲ್ಲಿ ಎಡವಿದ್ದ ಇಂತಹ ಜನರನ್ನು ಕಂಡೇ ಬಸವಣ್ಣನವರು ಎಚ್ಚರಿಕೆ ನೀಡುತ್ತಿದ್ದಾರೆ. ‘ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪ ನೋಡಾ.......’ ನಮ್ಮ ನುಡಿ, ನಮ್ಮ ನಡೆಯಲ್ಲಿ ಮೂಡಿಬರಬೇಕು. ಹಾಗಲ್ಲದೆ ನುಡಿಯಲ್ಲಿ ಜಾಗ್ರತರಾಗಿ ನಡೆಯಲ್ಲಿ ತಪ್ಪಿದೆವೆಂದರೆ, ನಮ್ಮಕರಸ್ಥಲದೊಳಗಿರುವ ಲಿಂಗವೇ ಘಟಸರ್ಪ. ಬಸವಣ್ಣನವರ ಈ ಮಾತು ಧಾರ್ಮಿಕ, ಆರ್ಥಿಕ, ರಾಜಕೀಯ ಮುಖಂಡರೆಲ್ಲರಿಗೂ ಅಷ್ಟೇ ಏಕೆ, ನಡೆಯಲ್ಲಿ ತಪ್ಪುವವರೆಲ್ಲರಿಗೂ ಅನ್ವಯಿಸುವುದು. ಈ ಎಲ್ಲಾರಂಗಗಳ ಮುಖಂಡರು ಹೇಳುವುದೇ ಒಂದಾದರೆ ಮಾಡುವುದೇ ಒಂದು. ಆದುದರಿಂದಲೇ ಅವರು ಹೇಳುವುದು ಒಮ್ಮೊಮ್ಮೆ ಸರಿಯೇ ಆಗಿದ್ದರೂ ಜನತೆಗೆ ಅದರಲ್ಲಿ ವಿಶ್ವಾಸವಿಲ್ಲದಂತಾಗುತ್ತದೆ. ಆದ್ದರಿಂದ ಮುಖಂಡನಾದವನು ತನ್ನ ನುಡಿಯಲ್ಲಿನ ಆದರ್ಶವನ್ನು ಮೊದಲು ತನ್ನ ನಡೆಯಲ್ಲಿ ತಂದು ತೋರಿಸಿದರೆ ಅಂತಹ ನುಡಿ, ಜನತೆಯ ಮೇಲೆ ಪರಿಣಾಮಕಾರಿಯಾಗಬಲ್ಲದು. ಜನತೆ ಅಂತಹದರಲ್ಲಿ ವಿಶ್ವಾಸವಿಡುವುದು. ಬಸವಣ್ಣ ಇಂತಹ ಒಂದು ಆದರ್ಶವನ್ನು ತನ್ನ ನಡೆನುಡಿಗಳಲ್ಲಿ ತೋರಿಸಿದ. ಆದುದರಿಂದಲೇ ನುಡಿಜಾಣ ನಡೆಧೀರನೆಂದು ಅಣ್ಣ ಪ್ರಶಂಸೆಗೆ ಪಾತ್ರನಾದ. ‘....... ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ ಕಡೆದಾಂಟದು ಕಾಣಾ ಕೂಡಲಸಂಗಮದೇವಾ’ ನುಡಿದಂತೆ ನಡೆಯದವನು ಬಡವನಿದ್ದಂತೆ. ಬಡವನ ಕೋಪಕ್ಕೆ ಹೇಗೆ ಬೆಲೆಯಿಲ್ಲವೋ ಹಾಗೆ ನಡೆಯಲ್ಲಿ ದುರ್ಬಲನಾದವನ ನುಡಿಗೂ ಬೆಲೆಯಿಲ್ಲ. ಬಡವ ಕೋಪಿಸಿದರೂ ಅದು ಅವನ ಅವುಡಿಗೆ (ದವಡೆಗೆ) ಮೃತ್ಯು ಅಂದರೆ ವಿನಾಶಕ್ಕೆ ಕಾರಣವೇ ಹೊರತು ಬೇರೆ ಯಾವ ಪ್ರಯೋಜನವೂ ಇಲ್ಲ. ನಡೆನುಡಿಗಳಲ್ಲಿ ಒಂದಾಗದವನ ಭಕ್ತಿ ಬಡಭಕ್ತಿ. ಇಂತಹ ಬಡಭಕ್ತಿಯಿಂದ ಯಾವ ಫಲವೂ ಉಂಟಾಗದು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.