Hindi Translationगुरुपदेश मंत्रवैद्य है, जंगमोपदेश शस्त्रवैद्य है,
देखो, भवरोग निवारण की यही प्रणाली है ।
कूडलसंगमेश के शरणों का अनुभाव
रजक के व्यवसाय सा है ॥
Translated by: Banakara K Gowdappa
English Translation The Guru's counsel is magic medicine;
The Jaṅgama's, behold, is surgery:
Mark you the way to overcome
The malady of this world
The experience of
Kūḍala Saṅga's Śaraṇās
Is as a washerman's work!
Translated by: L M A Menezes, S M Angadi
Tamil Translationகுருவின் அறிவுரை மந்திர மருத்துவம்
ஜங்கம அறிவுரை அறுவைச் சிகிச்சை காணாய்
பிறவிப் பிணியைக் களையும் வழியைக் காணாய்
கூடல சங்கனின் அடியாரின் ஆன்மீக அனுபவம்
மடிவாளனின் உழைப்பைப் போன்றதாம்
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಮಂತ್ರ ಹಾಕಿ ರೋಗಕ್ಕೆ ಚಿಕಿತ್ಸೆ ಮಾಡುವುದು ಮಂತ್ರೆವೈದ್ಯ, ಮಾತ್ರೆ ಚೂರ್ಣ ಕಷಾಯ ಭಸ್ಮಾದಿಗಳನ್ನು ಕೊಟ್ಟು ಚಿಕಿತ್ಸೆ ಮಾಡುವುದು ಔಷಧ ವೈದ್ಯ, ದೇಹಭಾಗವನ್ನು ಕೊಯ್ದು ಸರಿಪಡಿಸುವುದು ಶಸ್ತ್ರವೈದ್ಯ, ಈ ಚಿಕಿತ್ಸಾವಿಧಾನತ್ರಯದಲ್ಲಿ ಮೊದಲನೆಯದು ಪ್ರಾರಂಭಿಕಾವಸ್ಥೆಯಲ್ಲಿ, ಎರಡನೆಯದು ವಿಷಮಾವಸ್ಥೆಯಲ್ಲಿ. ಮೂರನೆಯದು ವಿಪನ್ನಾವಸ್ಥೆಯಲ್ಲಿ ಪ್ರಯೋಗಿಸಲ್ಪಡುವುದು.
ಗುರುವಾದವನು ಶಿವಧರ್ಮವನ್ನು ಸ್ವೀಕರಿಸಬೇಕೆಂಬ ಯಾವನಿಗಾದರೂ ದೀಕ್ಷೆಯನ್ನು ಕೊಟ್ಟು ಮಂತ್ರವನ್ನು ಉಪದೇಶಿಸಿ ಭಕ್ತಿವಂತನಾಗೆಂದು ನಿರ್ದೇಶನ ಮಾಡುವನು. ಆದರೆ ಆ ಭಕ್ತನು ಆ ಗುರುವಿನ ನಿರ್ದೇಶಕನಕ್ಕೆ ತಕ್ಕಂತೆ ನಡೆಯದೆ ಸುಳ್ಳುಭಕ್ತನಾಗಿ ಡಾಂಬಿಕ(ಭವ)ರೋಗಕ್ಕೆ ತುತ್ತಾಗಿದ್ದರೆ-ಅಂಥವನನ್ನು ಶರಣನು ಪರೀಕ್ಷಿಸಿ ಎಚ್ಚರ ಹೇಳಿ ತಿದ್ದಿ ಸರಿಪಡಿಸಲು ಯತ್ನಿಸುವನು. ಅದಕ್ಕೂ ಭಕ್ತನ ಭವರೋಗ ಜಗ್ಗದಿದ್ದರೆ –ಅವನನ್ನು ಜಂಗಮನು ಶಿಕ್ಷಿಸಿಯಾದರೂ ಸನ್ಮಾರ್ಗಕ್ಕೆ ತರುವನು.
ಬಟ್ಟೆಯಲ್ಲಿರುವ ಕೊಳೆಯನ್ನು ಕಳೆಯಲು ಆ ಬಟ್ಟೆಯನ್ನು ನೀರಲ್ಲಿ ನೆನಸಿ ಕೈಯಲ್ಲಿ ಕಸುಕಿ ಕಲ್ಲಮೇಲೆ ಘಟ್ಟಿಸುವಂತೆ ಗುರುಗಳೋ ಶರಣರೋ ಜಂಗಮರೋ ಭಕ್ತರನ್ನು ಸರಿದಾರಿಗೆ ತರಲು ಶ್ರಮವಹಿಸಬೇಕು.
ಏನೇ ಆದರೂ ಈ ಮೂವರೂ ಭಕ್ತರನ್ನು ತಿದ್ದಲು ಸಹಜ-ಕಠಿಣ-ನಿರ್ದಾಕ್ಷಿಣ್ಯ ಧೋರಣೆಗಳನ್ನು ಕೇವಲ ಉಪದೇಶಾತ್ಮಕವಾಗಿ ತಳೆಯುತ್ತಿದ್ದರೇ ಹೊರತು-ದೈಹಿಕವಾಗಿ ದಂಡಿಸುವ ಅಥವಾ ಬಹಿಷ್ಕರಿಸುವ ಅತಿರೇಕದ ಮಾರ್ಗ ಹಿಡಿಯುವಂತಿರಲಿಲ್ಲವೆಂಬುದನ್ನು ಗಮನಿಸಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.