Index   ವಚನ - 31    Search  
 
ಕಂಗಳ ಕಾಮವ ಜರಿದವರ ಕಂಡಡೆ ಎನ್ನ ಲಿಂಗಯ್ಯಾ ಬನ್ನಿ ಬನ್ನಿ ಎಂಬರಯ್ಯಾ. ರುದ್ರಲೋಕದ ರುದ್ರಗಣಂಗಳೆಲ್ಲರು ಬನ್ನಿ ಬನ್ನಿ ಎಂಬರಯ್ಯಾ. ಸರ್ವಲೋಕದ ಶ್ರೇಷ್ಠ ಜನಂಗಳು ಸಾಷ್ಟಾಂಗವ ಎರಗುವರಯ್ಯಾ. ಬಸವಾದಿ ಪ್ರಮಥಗಣಂಗಳು ಕಂಡು ಬಳಲಿದಿರಿ ಬಾರಯ್ಯಾ ಎಂದು ಅಡಿಗೆರಗುವರಯ್ಯಾ. ಅಮುಗೇಶ್ವರಲಿಂಗವನರಿದ ಶರಣರು ಅಡಿಗೆರಗುವರಯ್ಯಾ.