ಬಸವಣ್ಣ   
Index   ವಚನ - 676    Search  
 
ಒಡನೆ ಹುಟ್ಟಿದುದಲ್ಲ, ಒಡನೆ ಬೆಳೆದುದಲ್ಲ: ಎಡೆಯಲಾದ ಒಂದು ಉಡುಗೆಯನುಟ್ಟು, ಸಡಿಲಿದರೆ ಲಜ್ಜೆ-ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ! ಹಡೆದ ಗುರುಕರುಣದೊಡನೆ ಹುಟ್ಟಿದ ನೇಮವನು ಬಿಡದಿರೆಲವೋ; ಬಿಟ್ಟರೆ ಕಷ್ಟ. ಕೂಡಲಸಂಗಮದೇವನಡಸಿ ಕೆಡಹುವ ನಾಯಕನರಕದಲ್ಲಿ!