Index   ವಚನ - 33    Search  
 
ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು. ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು. ಇದಕ್ಕೆ ಗುರುವಿನ ಹಂಗೇಕ? ಲಿಂಗದಪೂಜೆ ಏಕೆ? ಸಮಯದ ಹಂಗೇಕೆ? ತನ್ನ ತಾನು ಅರಿದವಂಗೆ ಏಣಾಂಕನ ಶರಣರ ಸಂಗವೇಕೆ? ಇಷ್ಟವನರಿದವಂಗೆ ನಾನೇನು, ನೀನೇನು ಎಂಬ ಗೊಜಡಿನ ಭ್ರಮೆಯೇಕೆ ಅಮುಗೇಶ್ವರಾ?