Hindi Translationगाँव के पास जब दूध की नदी बहती है,
तो बाँझ गाय का पीछा क्यों करूँ?
क्यों निर्लज्ज होऊँ? अपमानित होऊँ?
कूडलसंगमदेव के रहते मुझे बिज्जळ का भंडार क्यों?
Translated by: Banakara K Gowdappa
English Translation When a stream of milk flows past
The village, why should I pursue
A cow reluctant to give milk?
Why should I lose all shame and decency?
So long as Lord Kūḍala saṅgama
Is within me , why should I care
For Bijjaḷa’s treasured hoard?
Translated by: L M A Menezes, S M Angadi
Tamil Translationஊரின் முன்பு பால்புனல் பாயும்பொழுது
முரட்டப்பசுவை நாடுவது ஏன் ஐயனே
நாணம் கெடுவது எதற்கு? வெட்கம் கெடுவதெதற்கு?
கூடல சங்கமதேவன் உள்ளவரையில்
பிஜ்ஜளனின் கருவூலம் எனக்கு எதற்கு ஐயனே.
Translated by: Smt. Kalyani Venkataraman, Chennai
Telugu Translationఊరిముందు పాలవాగు పారుచుండగ
గొడ్డుటావు వెంట నురక నేల?
లజ్జ చెడనేల? నాన చెడనేల? సంగడుండునందాక
బిజ్జలుని భండారము నా కేలనయ్యా?
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಮಾಹೇಶ್ವರನ ಶರಣಸ್ಥಲವಿಷಯ -
ನಿರ್ಭಿಡೆ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಬಸವಣ್ಣನವರು ಬಿಜ್ಜಳನ ಭಂಡಾರವನ್ನು ಸ್ವಂತಕ್ಕಾಗಲಿ ಸ್ವಧರ್ಮಕ್ಕಾಗಲಿ ದುರುಪಯೋಗ ಮಾಡಿಕೊಂಡಿಲ್ಲವೆಂದು ಹೇಳಿರುವುದನ್ನು ಕಂಡರೆ-ಸಮಕಾಲದಲ್ಲಿ ಇಂಥ ಆರೋಪಣೆಯನ್ನು ವಿರೋಧಿಗಳು ಅವರ ಮೇಲೆ ಹೊರಿಸಿರಬೇಕೆಂಬುದು ಸ್ಪಷ್ಟವೇ ಇದೆ. ಆ ವಿರೋಧಿಗಳ ಆರೋಪಣೆಯನ್ನು ಸಮರ್ಥಿಸುವಂತೆ-ಶಿವಶರಣರ ಸಮಾರಾಧನೆಗಳಿಗೆ ಬಸವಣ್ಣನವರು ಅಪಾರ ರಾಜಧನವನ್ನು ವೆಚ್ಚ ಮಾಡಿದುದಾಗಿಯೂ –ಅದನ್ನು ತಿಳಿದು ಬಿಜ್ಜಳನು ಭಂಡಾರವನ್ನು ತನಿಖೆ ಮಾಡಿಸಿದಾಗ –ಆ ವೆಚ್ಚವಾಗಿದ್ದುದೆಲ್ಲ ಮತ್ತೆ ಭರ್ತಿಯಾಗಿದ್ದುದಾಗಿಯೂ ಕಟ್ಟಿರುವ ಪುರಾಣದ ಪವಾಡ ಕಥೆಗಳಿವೆ. ಸಾರ್ವಜನಿಕ ಹಣವನ್ನು ಅಪವ್ಯಯ ಮಾಡದಿರುವ ನಿಯತ್ತೇ ಒಂದು ದೊಡ್ಡ ಪವಾಡವೆಂದರಿಯದ ದಡ್ಡಪುರಾಣಿಕರು ತಮ್ಮ ಮತಾಚಾರ್ಯನು ಮಹಿಮಾನ್ವಿತನಾಗಿ ತೋರಲೆಂದು-ಇಂಥ ಅವಿವೇಕಗಳನ್ನು ಹಿಗ್ಗಾಮುಗ್ಗ ನೆಯ್ದಿರುವುದು ಶೋಚನೀಯ. ಈ ಪುರಣಗಳನ್ನೇ ಹಿಡಿದು ಯಾವನಾದರೊಬ್ಬ ವಿಮರ್ಶಕ-ಬಸವಣ್ಣನವರು ಬಿಜ್ಜಳನ ಭಂಡಾರವನ್ನು ದುರುಪಯೋಗಪಡಿಸಿಕೊಂಡಿದ್ದರೂ ಇರಬಹುದೆಂದರೆ-ಅದು ಆ ವಿಮರ್ಶಕನ ಆತ್ಮವಿಮರ್ಶೆಯೇ ಆದೀತು !
ಮನೆಯ ಮುಂದೆಯೇ ಹಾಲು ಪ್ರವಾಹವಾಗಿ ಹರಿಯುತ್ತಿರುವಾಗ -ನಾನೇಕೆ ಒದೆಯುವ ಹಸುವಿನ ಹಿಂದೆ ಪಾತ್ರೆ ಹಿಡಿದು ಹೋಗಲಿ ? ಅದರ ಕೆಚ್ಚಲಿಗೆ ಕೈಹಾಕಿ ಒದೆಸಿಕೊಂಡು ನಾನೂ ಭಂಗಪಟ್ಟು –ಇತರರಿಂದಲೂ ನಗಿಸಿಕೊಳ್ಳಲಿ ? ನನ್ನ ಮಹದ್ಯೋಜನೆಗಳೆಲ್ಲವೂ ಶಿವನ ಕರುಣೆಯಿಂದ ಸುಸೂತ್ರವಾಗಿ ನಡೆಯುತ್ತಿರುವಾಗ -ಬಿಜ್ಜಳನ ಭಂಡಾರ ನನಗೇಕೆ ಬೇಕು –ಎಂಬ ಬಸವಣ್ಣನವರ ಮಾತಿನಲ್ಲಿ ಹಸ್ತಶುದ್ಧಿಯಿದೆ, ರಾಜಧನವನ್ನು ನಿಗದಿಯಾದುದಕ್ಕಲ್ಲದೆ ಅನ್ಯಕ್ಕೆ ಉಪಯೋಗಿಸಿಕೊಳ್ಳುವುದು ಲಜ್ಜಾಸ್ಪದವೆಂಬ ಪ್ರಜ್ಞೆಯಿದೆ. ತನ್ನ ಅಗತ್ಯಗಳನ್ನು ಪೂರೈಸಿಕೊಡುವ ಮೂಲವು ರಾಜಕೀಯೇತರವಾದ ಧರ್ಮಕ್ಷೇತ್ರದಲ್ಲಿ ದೈವೇಚ್ಛೆಯನುಸಾರ ಯಥೇಚ್ಛವಾಗಿಯೆಂಬ ಹಾರ್ದಿಕ ಬಿನ್ನಪವಿದೆ –ಎಂದಮೇಲೆ-ಮರ್ಯಾದಸ್ತರು ಮತ್ತು ಮರ್ಯಾದಸ್ತ ವಿಮರ್ಶಕರು ಅದನ್ನು ನಂಬಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.