Hindi Translationवल्मीक के ऊपर की रस्सी
स्पर्श करने पर भी मरते हैं संशयी,
सर्प दर्शन से भी नहीं मरते निस्संशयी।
कूडलसंगमदेव, शंकित को प्रसाद विष है,
कालकूट विष है॥
Translated by: Banakara K Gowdappa
English Translation The sceptics die even if they touch a rope
Upon an anthill; those who do not doubt
Do not die even when bitten by a snake!
O Kūḍala Saṅgama Lord,
Grace is a poison to the Sceptic, ay,
A deadly bane!
Translated by: L M A Menezes, S M Angadi
Tamil Translationபுற்றின் மேலுள்ள கயிற்றைத் தீண்டின்
ஐயமுள்ளோர் மடிவர் ஐயனே
உண்மையிலேயே அரவம் இருப்பினும்
ஐயமற்றோர் மடியார் ஐயனே
கூடல சங்கமதேவனே ஐயமுள்ளோருக்கு
காளகூட நஞ்சு பிரசாதம் ஐயனே.
Translated by: Smt. Kalyani Venkataraman, Chennai
Telugu Translationపుట్టపై గల పురిముట్ట శంకితుడప్పుడే చచ్చు;
సర్పదష్టుడయ్యు చావడు నిశ్శంకితుడు;
దేవా! శంకితునకు ప్రసాదము సింగి-కాలకూట విషము
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಪ್ರಸಾದಿಯ ಜ್ಞಾನಿಸ್ಥಲವಿಷಯ -
ಲಿಂಗನಿಷ್ಠೆ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಪ್ರಸಾದವನ್ನು ಕೊಂಬಾಗ ಇದರಿಂದ ನನ್ನಂಥವನಿಗೇನು ಒಳ್ಳೆಯದಾದೀತೆಂದು ಸಂಶಯಿಸುವುದು ಬೇಡ. ಈ ವಿಧವಾದ ಸಂಶಯದಲ್ಲಿ (ತಿರಸ್ಕಾರಭಾವಕ್ಕಿಂತ) ಭಯಾಂಶವೇ ಜಾಸ್ತಿಯಾಗಿರುವುದರಿಂದ –ಆ ಭಯದ ಫಲವಾಗಿ ಹೃದಯ ತಲ್ಲಣಗೊಂಡು –ಮನ ದುರ್ಬಲವಾಗುತ್ತದೆ –ಆಗ ಭಯಾನಕ ಪರಿಣಾಮಗಳಿಗೆ ಆತ್ಮ ಬಲಿಬೀಳುತ್ತದೆ. ಹುತ್ತದ ಮೇಲೆ ಬಿದ್ದಿರುವ ಒಂದು ಹಗ್ಗ ಸೋಕಿ ಹಾವೆಂದು ಹೌಹಾರಿದವನು ಸಾಯುವುದು ಇದಕ್ಕೊಂದು ಉತ್ತಮ ನಿದರ್ಶನ.
ಆದ್ದರಿಂದ ನಂಬಿ ಬಂದು ಶರಣಧರ್ಮಕ್ಕೆ ಸೇರಿದ ಮೇಲೆ ಆ ನಂಬಿಕೆಯ ಸಾಹಸದಿಂದಲೇ ಗುರು-ಲಿಂಗ-ಜಂಗಮ-ಆಚಾರ-ಪ್ರಸಾದವೆಂಬ ಗುಹಾಂತರ್ದೇವಾಲಯಗಳನ್ನು ನಿಶ್ಯಂಕಿತನಾಗಿ ಪ್ರವೇಶಿಸಬೇಕು –ಆಗ ಮಾತ್ರ ಅನಿಮಿಷಗುರುದರ್ಶನ, ಜ್ಯೋತಿರ್ಲಿಂಗ ಸಾನ್ನಿಧ್ಯ, ಜಂಗಮಶಕ್ತಿ ಸಂಕ್ರಮಣ, ಆಚಾರ ತೇಜಃ ಪರಿಪ್ಲಾವನ, ಪ್ರಸಾದಸಿದ್ಧಿ ಲಭಿಸುವುದು. ಹಾವೇ ಕಚ್ಚಿದರೂ (ವಿಷವೇರದಿದ್ದಾಗ) ಭಯಪಡದವರು ಬದುಕಿಕೊಳ್ಳುವುದು ಇದಕ್ಕೊಂದು ಉತ್ತಮ ನಿದರ್ಶನ.
ಬಸವಣ್ಣನವರ ಶಿವಧರ್ಮಕ್ಕೆ ಬಂದು ಸೇರಿದ ಮುಗ್ಧ ಜನಸಾಮಾನ್ಯರಿಗೆ ಈ ಮಾತು ಚೆನ್ನಾಗಿಯೇ ಅನ್ವಯಿಸುತ್ತದೆ.
ಹಚ್ಚಿದ ದೀಪವನ್ನು ಗಾಳಿ ಬೀಸಿದಾಗಲೆಲ್ಲಾ ಕೈಯಡ್ಡಮಾಡಿ, ಸೆರಗು ಮರೆಮಾಡಿ ಎದೆಗೊಡ್ಡಿಕೊಂಡು ಆ ಜ್ಯೋತಿಯನ್ನು ಸಂರಕ್ಷಿಸಿಕೊಳ್ಳುವಂತೆ –ಧರ್ಮಶ್ರದ್ಧೆಯನ್ನು ಅವಿಚಾರನಾಸ್ತಿಕರ ಗಾಳಿಯ ಮಾತುಗಳಿಂದ ಎಲ್ಲಂದರಲ್ಲೂ ರಕ್ಷಿಸಿಕೊಳ್ಳಬೇಕು.
“ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ |
ಜ್ಞಾನಂ ಲಬ್ದ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ || 39 ||
ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ |
ನಾಯಂ ಲೋಕೋಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ || 40 || (ಭಗವದ್ಗೀತೆ –ಅಧ್ಯಾಯ ನಾಲ್ಕು)
ತತ್ಪರನೂ ಜಿತೇಂದ್ರಿಯನೂ ಆದ ಶ್ರದ್ಧಾವಂತನಿಗೆ ಮಾತ್ರ ಜ್ಞಾನ ಲಭಿಸುವುದು –ಜ್ಞಾನಿಯಾದವನಿಗೆ ತಡವಿಲ್ಲದೆ ಪರಮ ಶಾಂತಿಯು ಮೈಮನಗಳಲ್ಲಿ ನಿಬಿಡವಾಗಿ ತುಂಬಿ ನಿಲ್ಲುವುದು. ಈ ಶಾಂತಿ, ಜ್ಞಾನ, ಶ್ರದ್ಧೆಯಿಲ್ಲದ ಸಂಶಯವಂತನು ಹಾಳಾಗುತ್ತಾನೆ. ಅವನಿಗೆ ಈ ಲೋಕಸುಖವೂ ಇಲ್ಲ, ಪರ(ಮ) ಸುಖವೂ ಇಲ್ಲ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.