Index   ವಚನ - 42    Search  
 
ಕಾಯವಿಕಾರಕ್ಕೆ ತಿರುಗುವರು ಕೋಟ್ಯನುಕೋಟಿ; ಕಡುಗಲಿಗಳನಾರನೂ ಕಾಣೆನಯ್ಯಾ. ಅಂಗ ಶೃಂಗಾರಿಗಳಾಗಿ ತಿರುಗುವರು ಕೋಟ್ಯಾನುಕೋಟಿ ಲಿಂಗ ಶೃಂಗಾರಿಗಳನಾರನೂ ಕಾಣೆನಯ್ಯಾ. ವಚನರಚನೆಯ ಅರ್ಥ ಅನುಭಾವವ ಬಲ್ಲೆನೆಂದು ಒಬ್ಬರನೊಬ್ಬರು ಜರಿದು ಸದ್ಯೋನ್ಮುಕ್ತರಾದೆವೆಂಬ ಜಗಭಂಡರ ಮೆಚ್ಚುವನೆ ಅಮುಗೇಶ್ವರಲಿಂಗವು?