Hindi Translationबोली मुक्तावलि सी हो।
बोली माणिक्य दीप्ति सी हो।
बोली स्फटिक शलाका सी हो।
बोली पर लिंग रीझ साधु, साधु कहे।
वचनानुसार आचरण न हो,
तो कूडलसंगमदेव कैसे प्रसन्न होंगे?
Translated by: Banakara K Gowdappa
English Translation If you should speak, your words should be
Pearls that are strung upon a thread.
If you should speak, your words should be
Like lustre by the ruby shed.
If you should speak, your words should be
A crystal's flash that cleaves the blue.
If you should speak, great God must say
Ay, ay, that's very true!
But if your deed betrays your word,
Can Kūḍala Saṅgama care for you?
Translated by: L M A Menezes, S M Angadi
Tamil Translationபேச்சு முத்துமாலையனைய இருக்கவேண்டும்
பேச்சு மாணிக்க ஒளியனைய இருக்கவேண்டும்
பேச்சு, பளிங்கின் கிரணமனைய இருக்க வேண்டும்
பேச்சு, இலிங்கம் மெச்சி, ஆமாம், ஆமாம்
எனக்கூறவேண்டும். சொல்லொருவிதம்
நடையொருவிதம் எனின் கூடல சங்கன்
எவ்விதம் அருள்வான் ஐயனே?
Translated by: Smt. Kalyani Venkataraman, Chennai
Urdu Translationجب بھی الفاظ نطق سےنکلیں
موتیوں کی لڑی کا ہواحساس
یوںتری گفتگو کا ہو انداز
جیسے ہیرے میں جگمگا ہٹ ہے
جیسے بلّورمیں صفائی ہے
ایک اک لفظ میں صداقت ہو
جس کی توثیق بھی ہولِنگا سے
جب نہ قول وعمل میںفرق رہے
تجھ کوحاصل رہےگی شام وسحر
کوڈلا سنگما کی خوشنودی
Translated by: Hameed Almas
ಸ್ಥಲ -
ಪ್ರಾಣಲಿಂಗಿಯ ಜ್ಞಾನಿಸ್ಥಲವಿಷಯ -
ನಡೆ-ನುಡಿ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನನಡೆ-ನುಡಿ ಪರಿಶುದ್ಧವಾಗಿರಬೇಕು
ವಾಕ್ಯವು ಭಾಷೆಯ ಒಂದು ಘಟಕ, (Sentence is a unit of a language.) ಮುತ್ತಿನ ಹಾರದಂತಿರಬೇಕು ಅ ವಾಕ್ಯಬಂಧ ಅಥವಾ ವಾಕ್ಯರಚನೆ. ಮುತ್ತಿನ ಹಾರದ ಒಂದೊಂದು ಮುತ್ತೂ ಬೆಲೆಬಾಳುವಂತೆ ವಾಕ್ಯದ ಒಂದೊಂದು ಪದವೂ ಅರ್ಥವತ್ತಾಗಿರಬೇಕು. ಅರ್ಥವೇ ಪದದ ನೈಜ ಮೌಲ್ಯ. ಮುತ್ತಿನ ಹಾರದ ಮುತ್ತುಗಳು ಒಂದು ಮತ್ತೊಂದಕ್ಕೆ ಹತ್ತಿರವಿದ್ದು ಪರಸ್ಪರ ಸಂಬಂಧ ಹೊಂದಿರುವಂತೆ ವಾಕ್ಯದ ಪದಗಳೂ ಹತ್ತಿರದಲ್ಲಿದ್ದು ಪರಸ್ಪರ ಸಂಬಂಧವಿರುವವುಗಳಾಬೇಕು. ಇದನ್ನೇ ಸಂಸ್ಕೃತದ ಲಾಕ್ಷಣಿಕರು 'ಆಸಕ್ತಿ' 'ಆಕಾಂಕ್ಷೆ' ಎಂಬ ಪದಗಳಿಂದ ಕರೆದಿರುವುದು. 'ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು'; ಮಾಣಿಕ್ಯದ ಪ್ರಭೆಯು ಸ್ಫುರಿಸುವಂತೆ ಸ್ಫುಟವಾಗಿ ಅರ್ಥವನ್ನು ಸ್ಫುರಿಸಬಲ್ಲ ಪದಗಳನ್ನು ಪ್ರಯೋಗಿಸಬೇಕು. ಮಾಣಿಕ್ಯದ ಪ್ರಭೆಯು ಸ್ವಯಂಪ್ರಕಾಶ. ಅಂತೆಯೇ ಪ್ರಯೋಗಿಸಿದ ಪದಗಳೂ ಸ್ವಯಂವೇದ್ಯವೆನಿಸಿಕೊಳ್ಳಬೇಕು. 'ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು'; ಸ್ಪಟಿಕದ ಹರಳಿನ ಸಲಾಕೆ ಬಹು ನಿರ್ಮಲವಾಗಿರುತ್ತದೆ. ಆ ಹರಳಿನ ಗಟ್ಟಿಯ ಕೆಳಗೆ ಒಂದು ಕೆಂಪು ಹೂವನ್ನಿರಿಸಿ ಮೇಲಿಂದ ನೋಡಿದರೆ ಇಡೀ ಹರಳೇ ಕೆಂಪಾಗಿ ತೋರುವುದು. ಅಂತೆಯೇ ನಮ್ಮ ಮಾತುಗಳು ನಮ್ಮ ಹೃದಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಂತಿರಬೇಕು. ಒಳಗೆ ಕುಟಿಲ ಹೊರಗೆ ವಿನಯ ಆಗಬಾರದು. ನುಡಿದರೆ ಲಿಂಗಮೆಚ್ಚಿ 'ಅಹುದಹುದೆನ್ನ ಬೇಕು'; ಲೋಕ ಮೆಚ್ಚುವಂತೆ ಸಿಹಿಯ ಮಾತುಗಳನ್ನಾಡುವುದು ಬಹು ಸುಲಭ; ಆದರೆ ದೇವರೂ ಕೂಡ ಮೆಚ್ಚಿ 'ಹೌದು ನೀನು ಹೇಳುತ್ತಿರುವುದು ಸರಿ' ಎನ್ನುವಂತಿರಬೇಕು ಹಾಗೆ ಮಾತನಾಡಬೇಕು. ಹೀಗೆ ನುಡಿಯ ಕಲಿತರೂ ಸಾಲದು ಅದನ್ನು ನಡೆಯಲ್ಲಿ ಅಳವಡಿಸಿಕೊಳ್ಳಬೇಕು. ಆಗಲೇ ದೇವರ ಒಲುಮೆಯು ದೊರೆಯುವುದು. ನುಡಿಯು ನಡೆಯಲ್ಲಿ ಅಳವಡದಿದ್ದರೆ ದೇವರು ಒಲಿಯಲಾರ.
ಇಂತು ನುಡಿಯ ಕಲಿಸಿದ ಬಸವಣ್ಣ ಮುಂದಿನ ವಚನದಲ್ಲಿ ನಡೆಯ ಕಲಿಸುವನು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.