Index   ವಚನ - 47    Search  
 
ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ, ಹಂದಿಯ ಮರಿಯ ಸರಪಳಿಯಲ್ಲಿ ಕಟ್ಟುವರೆ ಅಯ್ಯಾ? ಸಿಂಹದ ಮರಿಯ ಕಂಡಡೆ ಸೋಜಿಗಬಡುವರಲ್ಲದೆ, ಸಿಂಗಳೀಕನ ಮರಿಯ ಕಂಡಡೆ ಸೋಜಿಗಬಡುವರೆ ಅಯ್ಯಾ? ಕಸ್ತೂರಿಯಮೃಗವ ಕಂಡಡೆ ಆಶ್ಚರ್ಯಗೊಂಬರಲ್ಲದೆ ಕತ್ತೆಯಮರಿಯ ಕಂಡಡೆ ಕಣ್ಣಿನಲ್ಲಿ ನೋಡರು ನೋಡಾ. ಲಿಂಗವನಪ್ಪಿ ಅಗಲದಿಪ್ಪ ಲಿಂಗೈಕ್ಯನ ಕಂಡಡೆ ಜಗವೆಲ್ಲಾ ಕೊಂಡಾಡುತಿಪ್ಪರು ನೋಡಾ. ಅಮುಗೇಶ್ವರನೆಂಬ ಲಿಂಗವನರಿಯದ ಅಜ್ಞಾನಿಗಳ ಕಂಡಡೆ ಕತ್ತೆಯಮರಿಯೆಂದು ಕಣ್ಣುಮುಚ್ಚಿಕೊಂಡಿಪ್ಪರು ನೋಡಾ.