ಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ, ನಿಮ್ಮ ಧರ್ಮ !
ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ !
ಆರಡದಿರಿಂ ಭೋ, ನಿಮ್ಮ ಧರ್ಮ !
ಅಲ್ಲಿ ಉಂಬರೆ ಸಂಗ, ಇಲ್ಲಿ ಉಂಬರೆ ಸಂಗ!
ಕೂಡಲಸಂಗಮದೇವ ಏಕೋಭಾವ.
Hindi Translationकृपया मत कहो, चोरोंने गाय चुरा ली!
कृपया मत चिल्लाओ, कृपया मत चीखो,
वहाँ पीनेवाले भी संगमेश है,
यहाँ पीनेवाले भी संगमेश है,
कूडलसंगमदेव एक भाव के हैं ॥
Translated by: Banakara K Gowdappa
English Translation I pray you, do not say
The thieves have taken the cow!
I pray you, do not shout!
I pray you, do not bawl!
Whoever drinks there, is the Lord!
Whoever drinks here, is the Lord!
Lord Kūḍala Saṅgama
Is one and the same!
Translated by: L M A Menezes, S M Angadi
Tamil Translationபிராணலிங்கியின் மாகேசுவரத்தலம்
பசுக்களைக் கள்ளர் கொண்டு சென்றனர் என்னாதீர்
கூக்குரலிடாதீர், உம் அறம்
புலம்பாதீர், உம் அறம்
அங்கு உண்டால் சங்கன், இங்கு உண்டால் சங்கன்
கூடல சங்கமதேவன், மாற்றமற்றவன் அன்றோ!
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಬಸವಣ್ಣನವರ ನಿಜ ಜೀವನದಲ್ಲಿ ನಡೆದ ಒಂದು ವಾಸ್ತವ ಘಟನೆಯನ್ನು ಕುರಿತಿದೆ ಈ ವಚನ. ಈ ವೃತ್ತಾಂತವನ್ನು ಹರಿಹರನು ತನ್ನ ಬಸವರಾಜದೇವರ ರಗಳೆಯಲ್ಲಿ (ಸ್ಥಳ 9) ಹೃದಯಂಗಮವಾಗಿ ಚಿತ್ರಿಸಿದ್ದಾನೆ.
ಒಂದು ಸಲ ಬಸವಣ್ಣನವರ ಮನೆಯಲ್ಲಿ ಎಂದಿನಂತೆ ಶಿವಾನುಭವಗೋಷ್ಠಿ ನಡೆಯುತ್ತಿದ್ದಾಗ -ಹೊರಗಡೆಯಿಂದ ಕು-ಗುಗು ಗುಗು-ಕೂ ಎಂದು ಕೇಕೆಹಾಕಿದ ಶಬ್ದ ಕೇಳಿಸಿತು. ಬಂದ ಆಪತ್ತನ್ನು ಸೂಚಿಸುವ ಶಬ್ದವದು. ಗಾಬರಿಯಿಂದ ಏನಾಯಿತೆಂದು ಎಲ್ಲರೂ ಹೊರಬಾಗಿಲಿಗೆ ಓಡಿಬಂದರು. ಒಬ್ಬ ಗೊಲ್ಲ ಕು-ಗುಗು ಗುಗು-ಕೂ ಎಂದು ಆ ಕೂಗು ಹಾಕುತ್ತಿದ್ದುದನ್ನು ಕಂಡರು. ಅವನು ಬಸವಣ್ಣನವರ ಕೀಲಾರದ ದನಗಾಹಿಯೇ ಆಗಿದ್ದನು. ಅವನು ಭಯದಿಂದ ಅಸ್ತವ್ಯಸ್ತವಾಗಿ ಕಂಪಿಸುವ ಧ್ವನಿಯಲ್ಲಿ “ಕಳ್ಳರು ಭಕ್ತರ ವೇಷದಲ್ಲಿ ಬಂದು ಹಸುಗಳನ್ನು ಕದ್ದೊಯ್ದರು ಸ್ವಾಮಿ”ಎಂದು ಬಸವಣ್ಣನವರಿಗೆ ಬಿನ್ನವಿಸಿಕೊಂಡನು. ಅವರಿಗೆ “ಭಕ್ತರ ವೇಷದಲ್ಲಿ ಬಂದಿದ್ದವರು ಕಳ್ಳ”ರೆಂದ ಮಾತು ಅಸಂಗತವೆನಿಸಿತು, ಸಂಕಟವೂ ಆಯಿತು. “ಭಕ್ತರ ವೇಷದಲ್ಲಿದ್ದವರು ಭಕ್ತರೇ ಹೊರತು ಕಳ್ಳರಲ್ಲ. ಆ ಭಕ್ತರಿಗೇ ಸೇರಿದ್ದು ನನ್ನ ದನಕರು ಮನೆಮಾರು ಸರ್ವಸ್ವವೂ. ಅವರ ವಸ್ತುವನ್ನು ಅವರು ಕೊಂಡೊಯ್ದರು. ಅವರನ್ನೇಕೆ ಕಳ್ಳರೆನ್ನುತ್ತೀಯೆ. ಆ ಹಸುಗಳನ್ನು ಅವರಿಗೆ ಕೊಡದೆ ಇಟ್ಟು ಕೊಂಡಿದ್ದ ನಾನಲ್ಲವೇ ಕಳ್ಳ? ಈಗ ಅವನ್ನು ಕೊಂಡೊಯ್ದವರು ಶಿವಸ್ವರೂಪಿಗಳೇ –ಆ ಹಸುಗಳು ಇಲ್ಲಿದ್ದರೂ ಹಾಲನ್ನು ಉಣ್ಣುವನು ಶಿವನೇ, ಅಲ್ಲಿದ್ದರೂ ಉಣ್ಣುವನು ಆ ಶಿವನೇ”-ಎನ್ನುತ್ತ ಬಸವಣ್ಣನವರು ಗೊಲ್ಲನನ್ನು ಸಮಾಧಾನಪಡಿಸಿ -ಕರುಹಟ್ಟಿಯಲ್ಲಿರುವ ಕರುಗಳನ್ನೂ ಈ ಕೂಡಲೇ ಬಿಚ್ಚಿಬಿಡು, ಅವು ತಮ್ಮ ತಾಯಿಗಳನ್ನು ಆಗಲಿ ಮರುಗುತ್ತಿವೆ. ಆ ಹಸುಗಳೂ ಕರುಗಳನ್ನು ಆಗಲಿ ಉಮ್ಮಳಿಸುತ್ತಿವೆ. ತಾಯಿ ಮಕ್ಕಳನ್ನು ಅಗಲಿಸಬೇಡ -ಬೇಗ ಕರುಗಳು ತಾಯ್ಗಳನ್ನು ಕೂಡಿಕೊಳ್ಳುವಂತೆ ಮಾಡು –ಎಂದು ತವಕದಿಂದ ದಯೆಯಿಂದ ಮರುಕದಿಂದ ಬಿಗಿದು ಬಂದ ಕಂಠದಿಂದ ಗೊಲ್ಲನಿಗೆ ಅವಸರಪಡಿಸಿದರು. ಹಸುಗಳು ಹೋದವೆಂಬ ಚಿಂತೆಯಲ್ಲ ಬಸವಣ್ಣನವರಿಗೆ –ಕರುಗಳು ಹಸುಗಳನ್ನು ಅಗಲಿ ಹಾಲಿಲ್ಲದೆ ಅಕ್ಕರೆಯಿಲ್ಲದೆ ತಲ್ಲಣಿಸುವವೆಂಬುದು ಅವರ ಚಿಂತೆ ! “ದಯವಿಲ್ಲದ ಧರ್ಮವೇವುದಯ್ಯ” (ವಚನ 248) ಎಂಬ ಅವರ ವಚನ ಎಷ್ಟೊಂದು ನೈಜ!
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.