ಬಸವಣ್ಣ   
Index   ವಚನ - 858    Search  
 
ಆದಿತ್ಯ ಸೋಮರು ಆಗಿ ಹೋಗುತ್ತಿದ್ದಹರು; ಬ್ರಹ್ಮ ಪ್ರಳಯಕ್ಕೊಳಗಾದ, ಹರಿಯ ಸಿಂಹಾಸನವಡಗಿತ್ತು: ಅಂತೊ ನಾಸ್ತಿ, ಇಂತೊ ನಾಸ್ತಿ! ಇಂತು ರೋಮಜರೆಂಬರು ಸಿಟ್ಟುಗುಟ್ಟಿ ತರುಮರನಡಿಯಲಿದ್ದರು. ಮಾರ್ಕಂಡೇಯ ಮಹಾಮುನಿ ಸ್ವೇಚ್ಛಾಮರಣಿಯೆನಿಸಿಕೊಂಡನಲ್ಲದೆ, ಲಿಂಗದ ನಿಜವನರಿಯನು, ಇದು ಕಾರಣ, ಕೂಡಲಸಂಗಮದೇವಾ, ನೀವು ಮಾಡಿದ ಬಯಲು ಭಕ್ಷಿಸಿತ್ತು, ಅನಂತ ಹಿರಿಯರನು!