Hindi Translationभक्त, माहेश्वर, प्रसादी, प्राणलिंगी,
शरण, ऐक्य क्रमशः बनना चाहूँ, तो मैं वज्रदेही हूँ?
मैंने अमृत का सेवन किया है?
मैंने संजीवनी का सेवन किया है?
कथित वचनों से मेरे मन में
षट्स्थल आश्रय न पायें
तो यह तन जला दूँगा
कूडलसंगमदेव ॥
Translated by: Banakara K Gowdappa
English Translation Though I would be, by slow degrees,
Bhakta,Mahēśvara ,Prasādi ,Prāṇaliṅgi Śaraṇa,
And Aikya, is my body adament?
What drink immortal have I drunk?
Or eaten the life-restoring plant?
If the six-fold discipline on my lips
Does not possess my heart,
I burn this body of mine, O Lord
Kūḍala Saṅgama!
Translated by: L M A Menezes, S M Angadi
Tamil Translationபக்தன், மாகேசுவரன் பிரசாதி
பிராணலிங்கி, சரணன், ஐக்கியன்
என மெல்ல மெல்ல ஏறினோம் என்பர்
நான் வைரம் பாய்ந்த உடலுள்ளவனோ?
நான் என்ன அமுதத்தை அருந்தியவனோ?
ஸஞ்ஜீவினியைக் கொண்டவனோ?
கூறும் கூற்றில் ஆறுதலம் வந்து
என் மனத்தில் நிலைக்காது எனின்
உடலைச் சுடாதோ கூடல சங்கமதேவனே.
Translated by: Smt. Kalyani Venkataraman, Chennai
Telugu Translationతను మన ధనములనెడి అద్దమును చూడుమయ్యా
ఇది నాదీకాదు నీదీ కాదు వట్టి పిచ్చిమాట;
ఈ పిచ్చికి లోనై మీ శ్రీచరణము విడను ‘దేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಮಾಹೇಶ್ವರಸ್ಥಲವಿಷಯ -
ಷಟ್ ಸ್ಥಲ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಸದ್(ಶ್ರದ್ಧಾ)ಭಕ್ತಿಯಿಂದ ಭಕ್ತನು ಆಚಾರ(ಲಿಂಗ)ವಂತನಾಗಿ ಲಿಂಗಸ್ವರೂಪಿಯಾದ ಗುರುವಿನ ಬಳಿಸಾರಿ ಅವನನ್ನು ನಿಷ್ಠಾಭಕ್ತಿಯಿಂದ ಸೇವಿಸಿದರೆ –ಆ ಗುರು ಅವನಿಗೆ ಶಿವ(ಇಷ್ಟ)ಲಿಂಗವನ್ನು ದೀಕ್ಷಾಪೂರ್ವಕವಾಗಿ ಕೊಡವನು. ಹಾಗೆ ಲಿಂಗವಂತನಾದ ಭಕ್ತನು ಆ ಇಷ್ಟಲಿಂಗೋಪಾಸನೆಯಲ್ಲಿ ಅವಧಾನ (ಭಕ್ತಿ)ದಿಂದ ತೊಡಗಿದರೆ ಅವನಿಗೆ ಜಂಗಮ(ಲಿಂಗ)ನು ಪ್ರಸನ್ನನಾಗುವನು. ಆ ಜಂಗಮ(ಲಿಂಗ)ನ ಶಿವಾನುಭಾವಪ್ರಸಂಗವನ್ನು ಭಕ್ತನು ಭಕ್ತಿಯಿಂದ ಆಲಿಸಿ ಆಚರಿಸಿದರೆ ಅವನಿಗೆ ಮನಃಪ್ರಸಾದ(ಲಿಂಗ)ದೊರೆಯುವುದು, ಆ ಮನಃಪ್ರಸಾದದಲ್ಲಿ ಆನಂದ(ಭಕ್ತಿ ಭಾವ)ದಿಂದ ತಲ್ಲೀನವಾದರೆ ಅವನು ತಾನೇ ಮಹಾಲಿಂಗ ಪರಶಿವನಾಗುವನು. ಅದೇ ಸಮರಸ ಭಕ್ತಿ –ಅದೇ ಜೀವನ್ಮುಕ್ತಿ. ಎಂಬಲ್ಲಿಗೆ ಸಾಧಕನು ಭಕ್ತ ಮಾಹೇಶ್ವರ -ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯನೆಂದು ಏನೆಲ್ಲವೂ ಆದಂತೆಯೇ. ಷಟ್ಸ್ಥಲವನ್ನು ಭಕ್ತನು ಆಚರಿಸಬೇಕೆಂಬ ಪುರಾತನೋಕ್ತಿಯ ರಹಸ್ಯಾರ್ಥವಿದೇ ಆಗಿದೆ.
ಭಕ್ತ ಸದ್ಭಕ್ತಿ ಆಚಾರಲಿಂಗ
ಮಾಹೇಶ್ವರ ನಿಷ್ಠಾಭಕ್ತಿ ಗುರುಲಿಂಗ
ಪ್ರಸಾದಿ ಅವಧಾನಭಕ್ತಿ ಶಿವಲಿಂಗ
ಪ್ರಾಣಲಿಂಗಿ ಅನುಭಾವಭಕ್ತಿ ಚರಲಿಂಗ
ಶರಣ ಆನಂದಭಕ್ತಿ ಪ್ರಸಾದಲಿಂಗ
ಐಕ್ಯ ಸಮರಸಭಕ್ತಿ ಮಹಾಲಿಂಗ
ಹೀಗಲ್ಲದೆ ಭಕ್ತನಾಗಲು ಇಂತಿಷ್ಟು ವರ್ಷ ಬೇಕು, ಮಾಹೇಶ್ವರನಾಗಲು ಮತ್ತಷ್ಟು ವರ್ಷ ಬೇಕು, ಪ್ರಸಾದಿಯಾಗಲು ಮೇಲೆ ಬಹಳಷ್ಟು ವರ್ಷ ಬೇಕು –ಮುಂದೆ ಮುಂದೆ ಪ್ರಾಣಲಿಂಗಿಯಾಗಲು ಶರಣನಾಗಲು ಐಕ್ಯನಾಗಲು ಅಪಾರಕಾಲ ಬೇಕೆನ್ನುತ್ತ ಷಟ್ಸ್ಥಲಗಳನ್ನು ಭಿನ್ನಭಿನ್ನವಾಗಿ ಪ್ರತ್ಯೇಕಿಸಿ ಪ್ರತಿಬಂಧಿಸಿಡುವುದು ಸಲ್ಲದು.
ಲಿಂಗವಂತನು ಜಂಗಮವನ್ನು ಕೂಡಿಕೊಂಡು ಲಿಂಗಪೂಜೆ ಮಾಡಿ ಆ ಜಂಗಮದ ಶಿವಾನುಭಾವ ಪ್ರಸಂಗದಲ್ಲಿ ಮಗ್ನನಾಗಿರುವ ಸುಮುಹೂರ್ತವೊಂದರಲ್ಲೇ ಷಟ್ಸ್ಥಲಾವಸ್ಥೆಗಳೂ ಒಂದರಲ್ಲೊಂದು ನಿಮಗ್ನವಾಗುವವು.
ಆದುದರಿಂದಲೇ “ನುಡಿದ ನುಡಿಯೊಳಗೆ ಷಟ್ಸ್ಥಲ ಬಂದು ಎನ್ನ ಮನವನಿಂಬುಗೊಳ್ಳದಿದ್ದರೆ ಸುಡುವೆನೀ ತನುವ”ನೆಂದು ಬಸವಣ್ಣನವರು ಪರಿಚ್ಛೇದಿಸಿರುವರು.
ಯಾವನಾದರೊಬ್ಬನ ಜೀವನಾವಧಿಯೂ ಅತ್ಯಂತ ಹ್ರಸ್ವ ಮತ್ತು ಭಂಗುರು. ಈ ಅನಿಶ್ಚಿತಮರಣದ ಅಲ್ಪಾವಧಿಯ ಜೀವಮಾನದಲ್ಲಿ -ದಿವ್ಯಜೀವನಕ್ಕೆ ಬೇಕಾದ ಎಲ್ಲ ಅಂಶಗಳನ್ನೂ ಏಕಕಾಲದಲ್ಲಿ ಏಕತ್ರಗೊಳಿಸಿಕೊಂಡಿರಬೇಕೆಂದು ಈ ವಚನದ ತಾತ್ಪರ್ಯ.
ಕಾಲದ ಉಪಾಧಿಯಿಂದ –ಇಂದು ನಾಳೆಯೆಂಬ ಕಲ್ಪನೆಯುಂಟಾಗುವುದಾದರೂ -ಭಕ್ತಿಯೆಂಬುದು ಲಿಂಗವೆಂಬುದು ದಿವ್ಯಜೀವನವೆಂಬುದು ಅಖಂಡ ಮತ್ತು ಸಂಪೂರ್ಣ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.