Hindi Translationनेत्र में दर्शन शक्ति के रहते वे देखना क्यों नहीं जानते?
श्रवण में श्रवण-शक्ति के रहत वे सुनना क्यों नहीं जानते?
घ्राणशक्ति के रहते वे सूँघना क्यों नहीं जानते?
स्वादशक्ति जिह्वा में रहते वे स्वाद लेना क्यों नहीं जानते?
त्वचा में स्पर्श-ज्ञान-के रहते वे स्पर्श करना क्यों नहीं जानते?
काया में कायगुण के रहते वे नहीं तजते, पृथक नहीं होते ।
कूडलसंगमदेव, पहेली सुलझाना कठिन है ॥
Translated by: Banakara K Gowdappa
English Translation Although there was the eyesight in the eye,
Why couldn't they see, O Lord?
Though hearing was within the ear,
Why couldn't they hear, O Lord?
Though smell was in the nose,
Why couldn't they smell, O Lord?
Though taste was on the tongue,
Why couldn't they taste, O Lord?
Though touch was in the limbs,
Why couldn't they thouch, O Lord?
Although the soul was in their life,
Why couldn't they love, O Lord?
Since in the body corporal traits persist,
It cannot leave.
One cannot solve the mystery
Of the riddle Thou hast set,
O Kūḍala Saṅgama Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಇಂದ್ರಿಯ ಇಂದ್ರಿಯದಲ್ಲಿರುವ ಇಂದ್ರಿಯ ವಿಷಯ ಪ್ರಸಾದ
1 ಘ್ರಾಣ ಆಚಾರಲಿಂಗ ಗಂಧ ಗಂಧಪ್ರಸಾದ
2 ಜಿಹ್ವೆ ಗುರುಲಿಂಗ ರಸ ರಸಪ್ರಸಾದ
3 ಚಕ್ಷು ಶಿವಲಿಂಗ ರೂಪ ರೂಪಪ್ರಸಾದ
4 ಸ್ಪರ್ಶ(ತ್ವಕ್) ಜಂಗಮಲಿಂಗ ಸ್ಪರ್ಶನ ಸ್ಪರ್ಶಪ್ರಸಾದ
5 ಶ್ರೋತ್ರ ಪ್ರಸಾದಲಿಂಗ ಶಬ್ದ ಶಬ್ದಪ್ರಸಾದ
6 ಪ್ರಾಣ(ಹೃದಯ) ಪ್ರಾಣಲಿಂಗ ಪರಿಣಾಮ ಪರಿಣಾಮಪ್ರಸಾದ
7 ದೇಹ ಇಷ್ಟಲಿಂಗ (ಜೀವನಾನುಭವ) (ಹರ್ಷಪ್ರಸಾದ)
ಬಹಿರಂಗದಿಂದ ಸ್ಪಂದಿಸಿದ ಎಲ್ಲ ವಿಷಯಗಳೂ ಅಲ್ಲಲ್ಲಿಗೆ ನೆಲಸಿರುವ ಲಿಂಗಗಳಿಗೆ ಅರ್ಪಿತವಾಗಿ ಆ ಮೂಲಕ ಪ್ರಸಾದವಾಗಿ ಶರಣನಿಂದ ಇಂದ್ರಿಯಗಳ ಮೂಲಕ ಆಸ್ವಾದಿಸಲ್ಪಡುವವೆಂಬುದನ್ನು ಈ ಮೇಲಣ ವಿನ್ಯಾಸದಿಂದ ಮನಗಾಣಬೇಕು.
ಪಂಚೇಂದ್ರಿಯಗಳು ಆತ್ಮ(ಲಿಂಗ)ದ ಉಪಕರಣಗಳೇ ಹೊರತು ಅವುಗಳಲ್ಲಿ ಯಾವುದೊಂದಾಗಲಿ, ಎಲ್ಲವೂ ಸೇರಿಯಾಗಲಿ ಆತ್ಮ(ಲಿಂಗ)ವಾಗುವುದಿಲ್ಲ. ಮತ್ತು ಆ ಆತ್ಮ(ಲಿಂಗ)ದ ಸಂಪರ್ಕವಿದಿದ್ದರೆ ಆ ಪಂಚೇಂದ್ರಿಯಗಳೆಲ್ಲ ನಿಷ್ಕ್ರಿಯವಾಗುವಷ್ಟೇ ಅಲ್ಲ ಜಡವಾಗುವವು ಕೂಡ.
ಶರಣಧರ್ಮದ ಪ್ರಕಾರ ಪಂಚೇಂದ್ರಿಯಗಳಲ್ಲಿ ಅಚಾರಾದಿ ಪಂಚಲಿಂಗಗಳೂ ಪ್ರಾಣದಲ್ಲಿ ಪ್ರಾಣಲಿಂಗವೂ ದೇಹದಲ್ಲಿ ಇಷ್ಟಲಿಂಗವೂ ಪ್ರತಿಷ್ಠಿತವಾಗಿರುವವು. ಜೀವನು ಹೀಗೆ ತನ್ನ ಇಂದ್ರಿಯಗಳಲ್ಲಿ ಪ್ರಾಣದಲ್ಲಿ ದೇಹದಲ್ಲಿ ಅಡಗಿರುವ ಲಿಂಗವನ್ನು ತಿಳಿಯುವುದು ಸುಲಭವಲ್ಲ. ಈ ದುರ್ಭೇದ್ಯತೆಯನ್ನು ಕುರಿತು ಬಸವಣ್ಣನವರು –“ಕೂಡಲ ಸಂಗಮದೇವ ನೀನಿಕ್ಕಿದ ಅಣಕದ ಭೇದವ ಭೇದಿಸ ಬಾರದಯ್ಯ” ಎಂದು ಸೋಜಿಗಪಡುತ್ತಿರುವನು.
ಘ್ರಾಣಾದಿ ಇಂದ್ರಿಯಗಳಲ್ಲಿ ಆಚಾರಾದಿಲಿಂಗವಿದೆಯೆಂದು ತಿಳಿದು ಆ ಪ್ರಜ್ಞೆಯಿಂದ ಗಂಧಾದಿವಿಷಯಗಳನ್ನು ನಾವು ಸ್ವೀಕರಿಸಲು ಉಪಕ್ರಮಿಸಿದೆವೋ –ಆಗ ಆ ವಿಷಯಗಳೆಲ್ಲಾ ಪ್ರಸಾದವಾಗಿ –ಈ ಮರ್ತ್ಯವೆಲ್ಲಾ ಅಮೃತ ಸಮರಸವಾಗುವುದೆಂಬುದು ಈ ವಚನದ ತಾತ್ಪರ್ಯ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.