ಬಸವಣ್ಣ   
Index   ವಚನ - 1016    Search  
 
ಅರಿವಿನ ಆಪ್ಯಾಯನಕ್ಕೆ ಅನುಭಾವವೆ ತೃಪ್ತಿ, ಅರಿವು ನೆರೆ ಕೂಡಿ, ಆ(ಚಾ)ರವೆ ಪ್ರಾಣವಾಗಿ ವಿಶ್ರಮಿಸಿದ ಬಳಿಕ, ಶ್ರೀಗುರು ಕೃಪೆಯ ಮಾಡಿದ ಪ್ರಾಣಲಿಂಗದ ಘನವೆಂತೆಂದಡೆ: ಮತ್ಸ್ಯನುಂಗಿದ ಮಾಣಿಕ್ಯದಂತೆ, ಮುತ್ತುನುಂಗಿದ ನೀರಿನಂತೆ, ಕಣ್ಣಾಲಿ ನುಂಗಿದ ನೋಟದಂತೆ, ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ ಸ್ವಯಾನುಭಾವಿಗಳ ಅನುಭಾವವ ತೋರಿ ಬದುಕಿಸಾ, ಕೂಡಲಸಂಗಮದೇವಾ.