Index   ವಚನ - 72    Search  
 
ನಿರವಯಸ್ಥಲದಲ್ಲಿ ನಿಂದ ಲಿಂಗೈಕ್ಯಂಗೆ ಸಂದೇಹವುಂಟೆ? ಸಂಕಲ್ಪವುಂಟೆ? ಹೇಹ ಉಂಟೆ ನಿಜವನರಿದವಂಗೆ? ಇಂತೀ ತ್ರಿವಿಧವನರಿದಡೆ ಲಿಂಗೈಕ್ಯನೆಂಬೆನು. ಅರಿಯದಿರ್ದಡೆ ಕತ್ತೆ ಪರ್ವತಕ್ಕೆ ಹೋಗಿ, ಕಲ್ಲನೆಡಹಿ ಕಾಲು ಮುರಿದಂತಾಯ್ತು ಕಾಣಾ ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳಿಗೆ.