ಬಸವಣ್ಣ   
Index   ವಚನ - 1214    Search  
 
ತೋರುವನಯ್ಯಾ ಶಿವನು, ಅಡಗುವನಯ್ಯಾ ಶಿವನು. ಕಂಗಳ ಮುಂದೆ ಕಾಯಗೊಂಡು, ಮನದ ಮುಂದೆ ಕನಸಾಗಿ ಕಾಡುವನಯ್ಯಾ ಶಿವನು, ಒಂದೆಡೆಯಲ್ಲಿದ್ದು ಹಲವೆಡೆಯಲ್ಲಿ ತೋರುವನು, ಹಲವೆಡೆಯಲ್ಲಿದ್ದು ಒಂದೆ ರೂಪಾಗಿಪ್ಪನು. ಕೂಡಲಸಂಗಮದೇವನು ಚಿನುಮಯನಾಗಿ, ಎನಗೆ ಅಸಾಧ್ಯವಾದನು.