Index   ವಚನ - 86    Search  
 
ಮರ್ತ್ಯದಲ್ಲಿ ಹುಟ್ಟಿದವರೆಲ್ಲರೂ ಇಷ್ಟಲಿಂಗ ಸಂಬಂಧಿಗಳೆ? ಗುರುವಿನಲ್ಲಿ ಉಪದೇಶವ ಪಡೆದವರೆಲ್ಲರೂ ವಿರಕ್ತರಾಗಬಲ್ಲರೆ? ಭೂಮಿಯ ಮೇಲಣ ಕಾವಿಯ ಹೊದ್ದು ಕಾಯವಿಕಾರಕ್ಕೆ ತಿರುಗುವ ಗಾವಿಲರ ಲಾಂಛನಿಗಳೆಂದಡೆ ಅಮುಗೇಶ್ವರಲಿಂಗವು ನೋಡಿ ನೋಡಿ ನಗುತಿಪ್ಪುದು.