Index   ವಚನ - 92    Search  
 
ಮುಂಡವ ಬಿಟ್ಟು ತಲೆಯಲ್ಲಿ ನಡೆವ ತತ್ವಜ್ಞಾನಿಗಳ ತೋರಿಸಯ್ಯಾ. ಬೀದಿಯಲ್ಲಿ ಸುಳಿಯುವ ಬಿಸಿಲಕುದುರೆಯ ಏರಬಲ್ಲಡೆ, ಕಡುಗಲಿ ಎಂಬೆನು. ಮೃಡನ ಅರಿಯಬಲ್ಲಡೆ, ಪೊಡವಿಗೆ ಒಡೆಯರೆಂಬೆನು ಅಮುಗೇಶ್ವರಲಿಂಗಕ್ಕೆ ಅತ್ತಲಾದವರೆಂಬೆನು.