Index   ವಚನ - 108    Search  
 
ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು? ಸರ್ವಮಂತ್ರತಂತ್ರಸಿದ್ಧಿ ಮರ್ಮವರಿತಡೇನು? ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ. ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ. ಇದೇತರ ವ್ರತ, ಇದೇತರ ಜನ್ಮ ಸಾಫಲ್ಯ ಅಮುಗೇಶ್ವರಲಿಂಗವೆ?