ಶರಣೆ ಲಕ್ಕಮ್ಮನವರು ಅಂಗದಿಚ್ಛೆಗೆ ಬದುಕುವುದನ್ನು ನಿಲ್ಲಿಸಿ, ಲಿಂಗದಿಚ್ಛೆಯನುಗುಣವಾಗಿ ಬದುಕುವುದನ್ನು ಹೇಳುತ್ತಾರೆ. ಅಂಗದ ಬಯಕೆಗಳಿಗೆ ಕೊನೆಯೇ ಇಲ್ಲ. ಹೀಗಾಗಿ ಅದಕ್ಕೆ ಸದಾ ಬಡತನ. ಆದರೆ ಮನ ಘನಮನವಾದಾಗ, ಸುಮನವಾದಾಗ, ಮನವು ಸಿರಿವಂತವಾಗುತ್ತದೆ, ವಿಶಾಲವಾಗುತ್ತದೆ, ಉದಾರವಾಗುತ್ತದೆ. ಈ ರೀತಿ ವಿಕಾಸಗೊಂಡ ಮನಸ್ಸು ಪರಶಿವನ ನೆಲೆಯಾಗಲು ಬೇಕಾದ ತಯ್ಯಾರಿಯಾಗಿದೆ.
ಕಪಟ, ಕುತಂತ್ರ, ಕುಹಕ, ದ್ವಂದ್ವಗಳಿಂದ ಕೂಡಿದ ಮನದೊಂದಿಗೆ ನಾವು ಭಕ್ತರಾಗಲು ಸಾಧ್ಯವಿಲ್ಲ. ಲಿಂಗಾಂಗ ಸಾಮರಸ್ಯವಂತೂ ಬಲು ದೂರದ ಮಾತು.
  Ravi Sajjan