ಆಯ್ದಿಹೆನೆಂಬ ಕಾಯಕದ ಅರಿಕೆ ಹಿಂಗಿತೆ?
ನಾ ಮಾಡಿಹೆನೆಂಬ ತವಕ ಹಿಂಗಿತೆ?
ಉಭಯದ ಕೈಕೂಲಿ ಹಿಂಗಿ,
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ಅಲಸಿಕೆಯಾಯಿತು.
Art
Manuscript
Music
Courtesy:
Transliteration
Āydihenemba kāyakada arike hiṅgite?
Nā māḍ'̔ihenemba tavaka hiṅgite?
Ubhayada kaikūli hiṅgi,
mārayyapriya amalēśvaraliṅgakke
alasikeyāyitu.