ಕೈದ ಕೊಡುವರಲ್ಲದೆ
ಕಲಿತನವ ಕೊಡುವರುಂಟೆ ಮಾರಯ್ಯಾ?
ಹೆಣ್ಣ ಕೊಡುವರಲ್ಲದೆ
ಕೂಟಕ್ಕೊಳಗಾದವರುಂಟೆ ಮಾರಯ್ಯಾ?
ಕಳುವ ಚೋರಂಗೆ
ಬಡವರೆಂದು ದಯವುಂಟೆ ಮಾರಯ್ಯಾ?
ಮನವನೊರೆದು ಭಕ್ತಿಯ ನೋಡಿಹೆನೆಂಬವಂಗೆ
ಎಮ್ಮಲ್ಲಿ ಗುಣವ ಸಂಪಾದಿಸಲಿಲ್ಲ ಮಾರಯ್ಯಾ.
ಶೂಲವನೇರಿ ಸಂದಲ್ಲಿ ಮತ್ತಿನ್ನು
ಸಾವಿಂಗೆ ಹಂಗುಪಡಲೇಕೆ?
ಮಾರಯ್ಯಪ್ರಿಯ ಅಮರೇಶ್ವರಲಿಂಗಾ ನೀನೆ ಬಲ್ಲೆ.
Art
Manuscript
Music
Courtesy:
Transliteration
Kaida koḍuvarallade
kalitanava koḍuvaruṇṭe mārayyā?
Heṇṇa koḍuvarallade
kūṭakkoḷagādavaruṇṭe mārayyā?
Kaḷuva cōraṅge
baḍavarendu dayavuṇṭe mārayyā?
Manavanoredu bhaktiya nōḍ'̔ihenembavaṅge
em'malli guṇava sampādisalilla mārayyā.
Śūlavanēri sandalli mattinnu
sāviṅge haṅgupaḍalēke?
Mārayyapriya amarēśvaraliṅgā nīne balle.