Index   ವಚನ - 1    Search  
 
ಅರ್ಥಪ್ರಾಣಾಭಿಮಾನದ ಮೇಲೆ ಬಂದಡೂ ಬರಲಿ, ವ್ರತಹೀನನ ನೆರೆಯಲಾಗದು, ನೋಡಲು ನುಡಿಸಲು ಎಂತೂ ಆಗದು. ಹರಹರಾ, ಪಾಪವಶದಿಂದ ನೋಡಿದಡೆ, ರುದ್ರಜಪ ಮಾಹೇಶ್ವರಾರಾಧನೆಯ ಮಾಳ್ಪುದು. ಇಂತಲ್ಲದವರ ಉರಿಲಿಂಗಪೆದ್ದಿಗಳರಸ ನಕ್ಕು ಕಳೆವನವ್ವಾ.