ಎನ್ನ ಸ್ಥೂಲ ತನುವೆ ಬಸವಣ್ಣನಯ್ಯಾ.
ಎನ್ನ ಸೂಕ್ಷ್ಮ ತನುವೆ ಚೆನ್ನಬಸವಣ್ಣನಯ್ಯಾ.
ಎನ್ನ ಕಾರಣ ತನುವೆ ಪ್ರಭುದೇವರಯ್ಯಾ,
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
Art
Manuscript
Music
Courtesy:
Transliteration
Enna sthūla tanuve basavaṇṇanayyā.
Enna sūkṣma tanuve cennabasavaṇṇanayyā.
Enna kāraṇa tanuve prabhudēvarayyā,
intivara karuṇadindalānu badukidenayyā
kadirarem'miyoḍeya gum'mēśvarā.