ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು,
ನಿಂದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ- ಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
Art
Manuscript
Music
Courtesy:
Transliteration
Nā tiruhuva rāṭeya kulajātiya kēḷiraṇṇā
aḍiya halage brahma, tōraṇa viṣṇu,
ninda bombe mahārudra;
rudrana bembaḷiyaveraḍu sūtrakarṇa.
Arivemba kadiru, bhaktiyemba kaiyalli tiruhalāgi,
suttittu nūlu kadiru tumbittu.
Rāṭeya tiruhalāre- enna gaṇḍa kuṭṭiha
innēve kadirarem'miyoḍeya gum'mēśvarā.