•  
  •  
  •  
  •  
Index   ವಚನ - 242    Search  
 
ಐದು ಬಣ್ಣದ ಗಿಡುವಿಂಗೆ ಐದೆಲೆ ಐದು ಹೂ, ಐದು ಕಾಯಾಯಿತ್ತು. ಮತ್ತೈದರಠಾವಿನಲ್ಲಿ, ಐದು ಹೂವಿನ ಕ್ರಮದಲ್ಲಿ ಹಣ್ಣ ಮೆಲಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ನೋಡಾ!
Transliteration Aidu baṇṇada giḍuviṅge aidele aidu hū, aidu kāyāyittu. Mattaidaraṭhāvinalli, aidu hūvina kramadalli haṇṇa melaballaḍe, guhēśvaranemba liṅgavu tāne nōḍā!
Hindi Translation पाँच रंगवाले पौधे में पाँच पत्ते, पाँच पुष्प, पाँच फल, फिर पाँच स्थान में क्रम में पाँच फूल, फल खा सके तो गुहेश्वर खुद बनता है देखो ! Translated by: Banakara K Gowdappa Translated by: Eswara Sharma M and Govindarao B N
Tamil Translation ஐந்து வண்ணமுடைய செடியிலே ஐந்து இலை, ஐந்துபூ, ஐந்துகாய் காய்த்தது மற்ற ஐந்து இடத்தில் ஐம்மலரின் முறையில் கனியைச் சுவைப்பின் அவனே இலிங்கமாவான் காணாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಪಸ್ಥ = ಪ್ರಜನನ ಕಾರ್ಯ ಕರಣ; ಐದು ಎಲೆ = ಐದು ಕರ್ಮಕರಣಗಳು; ಐದು ಕಾಯಿ = ಐದು ವಿಷಯಗಳು ಮತ್ತು ಐದು ವಿಷಯಾನುಭವಗಳು; ಐದು ಬಣ್ಣ = ಐದು ಭೂತಗಳು; ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ; ಐದು ಹೂ = ಐದು ಜ್ಞಾನಕರಣಗಳು; ; ಐದು ಹೂವಿನ ಕ್ರಮದಲ್ಲ = ಶ್ರೋತ್ರ, ತ್ವಕ್, ನೇತ್ರ, ರಸನ, ಘ್ರಾಣ-ಈ ಕ್ರಮದಲ್ಲಿ; ಗಂಧ = ಗಂಧಾನುಭವ; ಗಿಡ = ವೃಕ್ಷ, ದೇಹ; ಘ್ರಾಣ = ಗಂಧಗ್ರಾಹಕ ಕರಣ; ಜಿಹ್ವೆ = ರಸಗ್ರಾಹಕ ಕರಣ; ತ್ವಕ್ = ಸ್ಪರ್ಶಗ್ರಾಹಕ ಕರಣ; ನೇತ್ರ = ರೂಪಗ್ರಾಹಕ ಕರಣ; ಪಾಣಿ = ಗ್ರಹಣಮಾಡುವ, ಹಿಡಿವ ಬಿಡುವ ಕಾರ್ಯ ಮಾಡುವ ಕರಣ; ಪಾದ = ನಡೆಯುವ, ನಿಲ್ಲುವ ಕಾರ್ಯಮಾಡುವ ಕರಣ; ಪಾಯು = ವಿಸರ್ಜನ ಕಾರ್ಯ ಕರಣ; ಮತ್ತೈದು = ಈ ದೇಹ ಕರಣಗಳಿಗೆ ಸ್ವರೂಪದಲ್ಲಿ ಭಿನ್ನವಾಗಿರುವ ಐದು ಲಿಂಗಗಳು;ದೇಹವು ದೇಹಗತ ಜ್ಞಾನಕರಣಗಳು ಜಡವಾಗಿವೆ,ಆ ಜ್ಞಾನಕರಣಗಳಲ್; ರಸ = ರಸಾನುಭವ; ರೂಪ = ರೂಪಾನುಭವ; ವಾಕ್ = ಧ್ವನಿ ನಿರ್ಮಾಣ ಅವಯವ; ಧ್ವನಿಯನ್ನು ನಿರ್ಮಿಸುವ ಕರಣ; ಶಬ್ದ = ಶಬ್ದಾನುಭವ; ಶ್ರೋತ್ರ = ಶಬ್ದಗ್ರಾಹಕ ಕರಣ; ಸ್ಪರ್ಶ = ಸ್ಪರ್ಶಾನುಭವ; ಹಣ್ಣ ಮೆಲಬಲ್ಲಡೆ = ಶಬ್ದಾದಿ ವಿಷಯಗಳನ್ನು ಅನುಕ್ರಮವಾಗಿ ಆ ಲಿಂಗಗಳಿಗೆ ಅರ್ಪಿಸಿ ಅನುಭವಿಸಬಲ್ಲಡೆ; Written by: Sri Siddeswara Swamiji, Vijayapura