ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು.
ಇದಾರಿಗೂ ಕಾಣಬಾರದು.
ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು.
ಸಾವಿರಕ್ಕೆ ಬೆಲೆಯಾಯಿತ್ತು.
ಆ ಬೆಲೆಯಾದ ಮಾಣಿಕ
ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು.
ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ;
ಕಾಣಬಾರದ ಕದಳಿಯ ಹೊಕ್ಕು, ನೂನ ಕದಳಿಯ ದಾಂಟಿ,
ಜಲವ ಶೋಧಿಸಿ, ಮನವ ನಿಲಿಸಿ,
ತನುವಿನೊಳಗಣ ಅನುವ ನೋಡುವನ್ನಕ್ಕ, ಮಾಣಿಕ ಸಿಕ್ಕಿತ್ತು.
ಆ ಮಾಣಿಕವ ನೋಡಿದೆನೆಂದು
ಜಗದ ಮನುಜರನೆ ಮರೆದು,
ತಾನು ತಾನಾಗಿ ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Kāṇabārada kadaḷiyalondu māṇika huṭṭittu.
Idārigū kāṇabāradu.
Mārihenendaḍe mānavarige sādhyavāgadu.
Sāvirakke beleyāyittu.
Ā beleyāda māṇika
nam'ma śivaśaraṇarige sādhyavāyittu.
Avaru ā māṇikava hēge belemāḍidarendaḍe;
kāṇabārada kadaḷiya hokku, nūna kadaḷiya dāṇṭi,
jalava śōdhisi, manava nilisi,
tanuvinoḷagaṇa anuva nōḍuvannakka, māṇika sikkittu.
Ā māṇikava nōḍidenendu
jagada manujarane maredu,
tānu tānāgi jñānajyōtiya beḷaginoḷagōlāḍi
sukhiyādenayyā, appaṇṇapriya cennabasavaṇṇā.