Index   ವಚನ - 89    Search  
 
ಅಯ್ಯಾ ನಾನು ಬಂದ ಬಂದ ಭವಾಂತರದಲ್ಲಿ ನೀವು ಕಡೆಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದಡೂ ನಿಮ್ಮ ಕಾಣದೆ ಇದ್ದೆನಯ್ಯಾ. ಅದು ಕಾರಣದಿಂದ, ಮನಕ್ಕೆ ಪ್ರಾಣವಾಗಿ ಬಂದು ನಿಂದಿರಿ, ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ ಕಾಣಲೊಡನೆ, ಎನ್ನ ತನು ಕರಗಿ, ಮನ ಮಗ್ನವಾಯಿತ್ತು ಎನ್ನ ಮರಣಭಯ ಹಿಂಗಿತ್ತು;ಎನ್ನ ಕಾಯಗುಣ ಕೆಟ್ಟಿತ್ತು ಕರಣಗುಣ ಸುಟ್ಟಿತ್ತು; ಭಾವವಳಿದಿತ್ತು; ಬಯಕೆ ಸವೆಯಿತ್ತು. ಮಹಾದೇವನಾದ ಶರಣ ಚೆನ್ನಮಲ್ಲೇಶ್ವರನ ಪಾದವಿಡಿದು ನಿಜ ಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.