ಬೆಟ್ಟ ಬೆಂದಿತ್ತು, ಬಿದಿರುಗಣ್ಣ ಒಡೆಯಿತ್ತು,
ಸುತ್ತ ನೋಡಿದಡೆ ನಿರಾಳವಾಯಿತ್ತು.
ಕತ್ತಲೆ ಹರಿಯಿತ್ತು; ಮನ ಬತ್ತಲೆಯಾಯಿತ್ತು.
ಚಿತ್ತ ಮನ ಬುದ್ಧಿ ಏಕವಾದವು.
ಎಚ್ಚತ್ತು ನೋಡಿದಡೆ, ಬಚ್ಚಬರಿಯ ಬೆಳಗಲ್ಲದೆ.
ಕತ್ತಲೆಯ ಕಾಣಬಾರದು ಕಾಣಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Album Name - Vachana Darshana, Singer - G V Atri, Music - G V Atri, Label - Jhankar Music
Transliteration
Beṭṭa bendittu, bidirugaṇṇa oḍeyittu,
sutta nōḍidaḍe nirāḷavāyittu.
Kattale hariyittu;mana battaleyāyittu.
Citta mana bud'dhi ēkavādavu.
Eccattu nōḍidaḍe, baccabariya beḷagallade.
Kattaleya kāṇabāradu kāṇā,
appaṇṇapriya cennabasavaṇṇā.