ಚಂದ್ರಮನೊಳಗಣ ಎರಳೆಯ
ನುಂಗಿದ ರಾಹುವಿನ ನೋಟವು,
ಅಂದಂದಿಗೆ ಬಂದು ಕಾಡಿತ್ತು ನೋಡಾ.
ಒಂದರ ತಲೆ, ಒಂದರ ಬಸುರು,
ಅಂದಂದಿಗೆ ಬಂದು ಕಾಡಿತ್ತು ನೋಡಾ.
ನಂದಿ ನಂದಿಯ ನುಂಗಿ ಬಂದುದು ಮಹೀತಳಕ್ಕಾಗಿ,
ಇಂದು, ರವಿಗಡಣವ ನಾನೇನೆಂಬೆ ಗುಹೇಶ್ವರಾ.
Transliteration Candramanoḷagaṇa eraḷeya
nuṅgida rāhuvina nōṭavu,
andandige bandu kāḍittu nōḍā.
Ondara tale, ondara basuru,
andandige bandu kāḍittu nōḍā.
Nandi nandiya nuṅgi bandudu mahītaḷakkāgi,
indu, ravigaḍaṇava nānēnembe guhēśvarā.
Hindi Translation चंद्रमा में रहीं हिरण को निगलते राहु की दृष्टि
कभी-कभी आकर सताता था देखो।
एक का सिर, एक का पेट,
बार बार आकर सताता था देखो |
नंदि,नंदि को निगलकर आया था महीतल पर।
इंदु-रवि के समूह को क्या कहूँ गुहेश्वरा ?
Translated by: Eswara Sharma M and Govindarao B N
Tamil Translation சந்திரனைச் சார்ந்த மானை விழுங்கிய ராகுவின் நோட்டம் அன்றன்று வந்து துன்புறுத்துவதைக் காணாய்,
ஒன்றின் தலை ஒன்றின் உடல்
அன்றன்று வந்து துன்புறுத்துவதைக் காணாய்,
இவ்வுலகத்தில் நந்தி நந்தியை விழுங்கியது.
இந்து ரவியின் தொடர்பை நான் என்னென்பேன் குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂದಂದಿಗೆ = ಜಾಗ್ರಾದಿ ಆಯಾ ಅವಸ್ಥೆಗಳಲ್ಲಿ; ಇಂದು = ಜೀವ; ನಂದಿ = ಜ್ಞಾನರೂಪನಾದ ಜೀವ;; ನಂದಿಯ ನುಂಗಿ = ತನ್ನ ಮೂಲಸ್ವರೂಪದ ಜ್ಞಾನವನ್ನೇ ನುಂಗಿ, ಕಳೆದುಕೊಂಡು, ಮರೆತು; ಮಹೀತಳ = ಮಣ್ಣಿನ ದೇಹ, ಭೌತಜಗತ್ತು; ರವಿ = ಜ್ಞಾನಪ್ರಕಾಶನಾದ ಶಿವ;
Written by: Sri Siddeswara Swamiji, Vijayapura