ಇಷ್ಟಲಿಂಗಕ್ಕೆ ರೂಪನರ್ಪಿಸಿ ದ್ರವ್ಯಶುದ್ಧವಾಯಿತ್ತೆಂದು
ಪ್ರಾಣಲಿಂಗಕ್ಕೆ ಆರೋಗಣೆಯನಿಕ್ಕುವಾಗ,
ನಿಚ್ಚ[ಕ್ಕೆ] ನಿಚ್ಚ ಕಿಲ್ಬಿಷವೆಂದರಿಯರು.
ಇಷ್ಟಲಿಂಗ ಪ್ರಾಣಲಿಂಗದ,
ಆದಿ ಅಂತುವನಾರೂ ಅರಿಯರು.
ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು
ಹಿಂದುಗಾಣದೆ ಮುಂದುಗೆಟ್ಟರು.
Transliteration Iṣṭaliṅgakke rūpanarpisi dravyaśud'dhavāyittendu
prāṇaliṅgakke ārōgaṇeyanikkuvāga,
nicca[kke] nicca kilbiṣavendariyaru.
Iṣṭaliṅga prāṇaliṅgada,
ādi antuvanārū ariyaru.
Idu kāraṇa, guhēśvarā nim'ma śaraṇaru
hindugāṇade mundugeṭṭaru.
Hindi Translation इष्टलिंग को रूप अर्पित कर द्रव्य शुद्ध हुआ कहें तो
प्राणलिंग को प्रसाद चढाते वक्त
सौ प्रतिशत किल्बिष ये नहीं जानते।
इष्टलिंग – प्राणलिंग का आदि-अंत्य कोई नहीं जानता ।
इस कारण से गुहेश्वरा,
तुम्हारे शरण पूर्व नहीं दीखते आगे बिगडे।
Translated by: Banakara K Gowdappa
Translated by: Eswara Sharma M and Govindarao B N
Tamil Translation இஷ்டலிங்கத்திற்குப் பொருட்களைப் படைத்து
அவை தூய்மையுற்றன என்று
பிராணலிங்கத்திற்கு அளிப்பின் அது
நூற்றுக்கு நூறு தவறான தென்பதை அறியார்.
இஷ்டலிங்க பிராணலிங்கத்தின் ஆதி அந்தத்தை
யாரும் அறியார். எனவே குஹேசுவரனே
உம் சரணரின் முற்பிறவி வாசனை அகன்றது
இனி அவருக்குப் பிறவியும் இல்லை.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದಿ ಅಂತು = ಆದಿ ಮತ್ತು ಅಂತ್ಯ; ಲಿಂಗದ ನೆಲೆ-ಕಲೆ; ಮೂಲಸ್ವರೂಪ; ಸಮಗ್ರ ಇರುವಿಕೆ; ಮುಂದುಗೆಡು = ನಾಶವಾಗು, ಭವಕ್ಕೆ ಒಳಗಾಗು, ಮುಂದೆ ದೊರೆಯಬಹುದಾದ ಸಮರಸಾನಂದ ಫಲವನ್ನು ಕಳೆದುಕೊಳ್ಳು; ಹಿಂದುಗಾಣು = ಹಿಂದಿನದನ್ನು ನೋಡು, ವಿಶ್ವದ ಪರಮಮೂಲವಾದ ಲಿಂಗವನ್ನು ಅರಿ;
Written by: Sri Siddeswara Swamiji, Vijayapura