Index   ವಚನ - 864    Search  
 
ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು | ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು || ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ | ಒಳಗೂಡು ವಿಶ್ವದಲಿ – ಮಂಕುತಿಮ್ಮ || ಕಗ್ಗ ೮೬೪ ||