•  
  •  
  •  
  •  
Index   ವಚನ - 259    Search  
 
ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ, ಸೂರ್ಯ ಚಂದ್ರರೆಂಬ ಅಂಕಣಿ, ಬ್ರಹ್ಮನೆ ಹಲ್ಲಣ, ಸುರಾಳವೆಂದಲ್ಲಿ ನಿರಾಳವಾಯಿತ್ತು, ಗುಹೇಶ್ವರನೆಂಬ ರಾವುತಂಗೆ.
Transliteration Svaravemba kudurege viṣṇuvemba kaḍivāṇa, sūrya candraremba aṅkaṇi, brahmane hallaṇa, surāḷavendalli nirāḷavāyittu, guhēśvaranemba rāvutaṅge.
Hindi Translation स्वर जैसे घोडे को विष्णु नामक लगाम। चंद्रसूर्य जैसे रिकाब, ब्र्ह्म ही जीन। ये सब साकार हो तो निराल हुआ गुहेश्वर जैसे घुडसवार को। Translated by: Eswara Sharma M and Govindarao B N
Tamil Translation மந்திரம் எனும் குதிரைக்கு விஷ்ணு எனும் கடிவாளம் சந்திரன், சூரியன் எனும் வளையம், பிரம்மனே அம்பாரி பிராணலிங்கத்தைக் கண்டு ஒன்றுகிறான். குஹேசுவரன் எனும் ராவுத்தன். Translated by: Smt. Kalyani Venkataraman, Chennai
ಶಬ್ದಾರ್ಥಗಳು ಚಂದ್ರ = ಇಡಾನಾಡಿ; ವಿಷ್ಣುವೆಂಬ ಕಡಿವಾಣ = ವಿಷ್ಣು ನಿಯಮಕರ್ತ, ನಿಯಮನ ಶಕ್ತಿ; ಸೂರ್ಯ = ಪಿಂಗಳಾನಾಡಿ; ಸ್ವರವೆಂಬ ಕುದುರೆ = ಹಂ-ಸಃ ಎಂಬ ಸ್ವರ ಸಹಿತವಾಗಿ ಪ್ರವಹಿಸುವ ಪ್ರಾಣಶಕ್ತಿ; Written by: Sri Siddeswara Swamiji, Vijayapura