ಧಾತು ಮಾತು ಪಲ್ಲಟಿಸಿದರೆ,
ಗಮನವಿನ್ನೆಲ್ಲಿಯದೊ?
ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ.
ಸುಜ್ಞಾನಭರಿತ, ಅನುಪಮಸುಖಿ
ಗುಹೇಶ್ವರಾ ನಿಮ್ಮ ಶರಣನು.
Transliteration Dhātu mātu pallaṭisidare,
gamanavinnelliyado?
Dhyāna maunavembudu tanuguṇa sandēhavayyā.
Sujñānabharita, anupamasukhi
guhēśvarā nim'ma śaraṇanu.
Hindi Translation शरीर – वाणी पलटा तो गमन कहाँ है ?
ध्यान-मौन, तनु गुण संबंध है।
सुज्ञान भरित अनुपम सुखी,
गुहेश्वरा, तुम्हारा शरण!
Translated by: Eswara Sharma M and Govindarao B N
Tamil Translation செயலும் சொல்லும் மாறுபடின் ஞானம் வருமோ?
தியானம், மௌனம், உடலியல்பொடு தொடர்புடையது
குஹேசுவரனே, உம் சரணன், ஞானம் நிறைந்த
உவமிக்கவியலாப் பேரின்பமுடையவனன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಗಮನ = ಜ್ಞಾನ, ಸಿದ್ಧಿ; ಧಾತು = ದೇಹ, ದೇಹಸಂಬಂಧದ ಕ್ರಿಯೆ; ಧ್ಯಾನ = ಧ್ಯೇಯವಸ್ತುವಿನ ಚಿಂತನೆ; ಪಲ್ಲಟಿಸು = ವ್ಯತ್ಯಾಸಗೊಳ್ಳು, ಬದಲಾಗು, ಏಕರೂಪವಾಗದೆ ಇರುವುದು; ಮೌನ = ಮಾತು ಶಾಂತವಾಗಿರುವುದು;
Written by: Sri Siddeswara Swamiji, Vijayapura