•  
  •  
  •  
  •  
Index   ವಚನ - 268    Search  
 
ಅಗ್ನಿ ಮುಟ್ಟಲು ತೃಣ, ಭಸ್ಮವಾದುದನೆಲ್ಲರೂ ಬಲ್ಲರು. ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ. ಅಗ್ನಿ ಜಲವ ನುಂಗಿತ್ತು, ಜಲ ಅಗ್ನಿಯ ನುಂಗಿತ್ತು. ಪೃಥ್ವಿ ಎಲ್ಲವ ನುಂಗಿತ್ತು, ಆಕಾಶವನೆಯ್ದೆ ನುಂಗಿತ್ತು. ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ- ತಿಳಿಯ ಬಲ್ಲಡೆ ಗುಹೇಶ್ವರನ ನಿಲವು ತಾನೆ!
Transliteration Agni muṭṭalu tr̥ṇa, bhasmavādudanellarū ballaru. Tr̥ṇadoḷage agniyuṇṭembuda tiḷidu nōḍire. Agni jalava nuṅgittu, jala agniya nuṅgittu. Pr̥thvi ellava nuṅgittu, ākāśavaneyde nuṅgittu. Aridenemba jaḍarugaḷu nīvu tiḷidu nōḍire- tiḷiya ballaḍe guhēśvarana nilavu tāne!
Hindi Translation अग्नि छूते ही तृण भस्म होना सब जानते । तृण में अग्नि है यह जानकर देखें। अग्नि जल निगली थी, जल अग्नि को निगला था। पृथ्वी सब को निगली थी, आकाश को भी निगली थी । जानेमाने जड देही तुम जानकर देखो । जान सकते हो तो गुहेश्वर की स्थिति खुद होती! Translated by: Eswara Sharma M and Govindarao B N
Tamil Translation அழல் தீண்டிட புல் எரியுமென்பதை அனைவருமறிவர் புல்லினுள்ளே அழலுள்ளது என்பதை அறிமின் அழல் நீரை விழுங்கியது, நீர் அழலை விழுங்கியது நிலம் ஆகாய உட்பட அனைத்தையும் விழுங்கியது அறிந்தோமெனும் ஜடங்கள் நீவிர் ஆராய்ந்து அறிவீர் அறியவியன்றால் குஹேசுவரனின் நிலையன்றோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗ್ನಿ = ಶಿವಜ್ಞಾನ, ಪರವಸ್ತುವೆ ನಾನು ಎಂಬ ಅನುಭೂತಿ; ಆಕಾಶ = ಪರಮ ಆತ್ಮವಸ್ತು; ಜಡರು = ಆತ್ಮವಸ್ತುವಿನ ನಿಜಸ್ವರೂಪದ ಅರಿವಿಲ್ಲದವರು; ಜಲ = ಮನಸ್ಸು; ಪೃಥ್ವಿ = ದೇಹ; Written by: Sri Siddeswara Swamiji, Vijayapura