ವಚನ - 27     
 
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ, ಮೇದು ಬಂದೆನೆಂದಡೆ, ಇದ ಕಂಡು ಬೆರಗಾದೆ. ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ, ಇದ ಕಂಡು ಬೆರಗಾದೆ. ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ, ಇದ ಕಂಡು ಬೆರಗಾದೆ, ಗುಹೇಶ್ವರಾ.