ಅನಾಚಾರ ಅಳವಟ್ಟು ಗುರುವನರಿಯಬೇಕು.
ಅನಾಮಿಕನಾಗಿ ಲಿಂಗವ ಗ್ರಹಿಸಬೇಕು.
ಸರ್ವಪಾತಕ ಪ್ರಸನ್ನನಾಗಿ ಜಂಗಮವ ಭಾವಿಸಬೇಕು.
ಇಂತೀ ತ್ರಿವಿಧ ಪಾತಕಂಗಳಲ್ಲಿ ಪವಿತ್ರಂಗಳನರಿದು
ಇರವಿನಲ್ಲಿ ಇರವನಿಂಬಿಟ್ಟು
ಉರಿ ಎಣ್ಣೆಯ ವೇಧಿಸಿ ಉರಿದು ಯೋಗ ನಿಂದಲ್ಲಿ,
ಮಾಡುವ ಕ್ರೀ ಮಾಡಿಸಿಕೊಂಬ ವಸ್ತು
ಉಭಯ ನಷ್ಟವಹನ್ನಕ್ಕ
ನೀ ಎನ್ನಲ್ಲಿ ನಾ ನಿಮ್ಮಲ್ಲಿ ಎಂಬನ್ನಕ್ಕ ಅದು ಭಿನ್ನಭಾವ.
ಈ ಉಭಯದ ಗನ್ನ ಬೇಡ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ,
ಎನ್ನಲ್ಲಿ ತಲ್ಲೀಯವಾಗಿರು.
Art
Manuscript
Music
Courtesy:
Transliteration
Anācāra aḷavaṭṭu guruvanariyabēku.
Anāmikanāgi liṅgava grahisabēku.
Sarvapātaka prasannanāgi jaṅgamava bhāvisabēku.
Intī trividha pātakaṅgaḷalli pavitraṅgaḷanaridu
iravinalli iravanimbiṭṭu
uri eṇṇeya vēdhisi uridu yōga nindalli,
māḍuva krī māḍisikomba vastu
ubhaya naṣṭavahannakka
nī ennalli nā nim'malli embannakka adu bhinnabhāva.
Ī ubhayada ganna bēḍa,
ennayyapriya im'maḍi niḥkaḷaṅka mallikārjunā,
ennalli tallīyavāgiru.