ಕೂಟಕ್ಕೆ ಕುರುಹಾದುದನರಿಯದೆ,
ಆತ್ಮಕ್ಕೆ ಅರಿವಾದುದನರಿಯದೆ,
ಕೈಲಾಸವೆಂಬ ಸೂತ್ರದ ಒಳಗಿಗೆ ಮನಸೋತಿರಲ್ಲಾ?
ಅಂಧಕನ ಕೈಯ ರತ್ನದಂತೆ ಆದಿರಲ್ಲಾ?
ಪಂಗುಳನ ಕರದ ಶಸ್ತ್ರದಂತೆ ಆದಿರಲ್ಲಾ?
ಈ ನಿರಂಗವ ತಿಳಿದು ನಿಂದಲ್ಲಿ ಬೇರೆ ಲಿಂಗವಡಗುವದಕ್ಕೆ
ಉಭಯವುಂಟೆಂಬ ದಂದುಗ ಬೇಡ.
ತಾ ನಿಂದಲ್ಲಿಯೆ ನಿಜಕೂಟ,
ತಿಳಿದಲ್ಲಿಯೆ ನಿರಂಗವೆಂಬುದು.ಉಭಯವಿಲ್ಲ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
Art
Manuscript
Music
Courtesy:
Transliteration
Kūṭakke kuruhādudanariyade,
ātmakke arivādudanariyade,
kailāsavemba sūtrada oḷagige manasōtirallā?
Andhakana kaiya ratnadante ādirallā?
Paṅguḷana karada śastradante ādirallā?
Ī niraṅgava tiḷidu nindalli bēre liṅgavaḍaguvadakke
ubhayavuṇṭemba danduga bēḍa.
Tā nindalliye nijakūṭa,
tiḷidalliye niraṅgavembudu.Ubhayavilla
ennayyapriya im'maḍi niḥkaḷaṅka mallikārjunanalli.