Index   ವಚನ - 56    Search  
 
ಮನೆಯಲ್ಲಿ ವೀರ ಧೀರ; ರಣದಲ್ಲಿ ಓಸರಿಸಿದ ಮತ್ತೆ ಭಾಷೆಯ ಬಂಟನಲ್ಲ. ನೀ ಬಂದ ದೇಶ, ನೀ ಮಾಡುವ ಮಾಟ. ನೀ ಪ್ರಮಥರೆಲ್ಲರ ಹಂಗಿಸುವ ನಿರಂಗವಾಚಕನ ಕೂಡಿಹೆನೆಂಬ ಸಂಧಿಯಲ್ಲಿಯೇ ನಿಂದಿತ್ತು ನಿಜಲಿಂಗದಕೂಟ. ಆ ಸುಸಂಗವ ನಿನ್ನ ನೀನೆ ನೋಡಿಕೊ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.