Index   ವಚನ - 2    Search  
 
ಅರ್ಚನೆ ಪೂಜನೆ ನೇಮವಲ್ಲ; ಮಂತ್ರ ತಂತ್ರ ನೇಮವಲ್ಲ; ಧೂಪ ದೀಪಾರತಿ ನೇಮವಲ್ಲ; ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ. ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.