ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು.
ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು.
ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು.
ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು.
ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು.
'ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ'
ಎಂದುದಾಗಿ,
ವಾಙ್ಮನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು
ಥಳಥಳಿಸಿ ಬೆಳಬೆಳಗಿ ಹೊಳೆವುತ್ತ,
ನಿಶ್ಶಬ್ದ ಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು.
Art
Manuscript
Music
Courtesy:
Transliteration
Udakadoḷagaṇa kiccinante liṅgaikyavu.
Vāyunuṅgida parimaḷadante liṅgaikyavu.
Uriyoḷaḍagida karpūradante liṅgaikyavu.
Bhāvavanaḍasida bayalinante liṅgaikyavu.
Arivu nuṅgida marahinante liṅgaikyavu.
'Yatō vācō nivartantē aprāpyamanasā saha'
endudāgi,
vāṅmanakke agōcaravāda mahāśaraṇana oḷagoṇḍu
thaḷathaḷisi beḷabeḷagi hoḷevutta,
niśśabda brahmavāgirdanayyā nam'ma śambhujakkēśvaranu.