Index   ವಚನ - 13    Search  
 
ಜಾಣಾನುಭಾವಿಯೆಂಬ ಪಿನಾಕಿಯ ಮಾತ ಕೇಳಿ ಬಂದೆ. ಹಿರಿದು ಆರತದಿಂದ ಕಾಣಿಸುವನ್ನಕ್ಕರ ತವಕ, ನುಡಿಗೆಡೆಗೊಡನೆಲಗೆ, ಪ್ರಾಣಕ್ಕಾಧಾರ ಶಿವಶಿವಾ ಎಂಬ ಶಬುದ. ಆತನ ಕಂಡಡೆ ಕಡೆಯದ ಕೀಲು ಕಳೆದಂತೆ ಶಂಭುಜಕ್ಕೇಶ್ವರನ ಬೆರಸಲೊಡನೆ ಬೆರಗಾದೆನು.