Index   ವಚನ - 17    Search  
 
ನಡೆದವರುಂಟೆ ಕೈಲಾಸಕ್ಕೆ ದಾಳಿಯ ? ನುಡಿದವರುಂಟೆ ಶಿವಲಾಂಛನಕ್ಕೆ ವೇಳೆಯ ? ಕುಡಿದವರುಂಟೆ ಕಾಳಕೂಟವಿಷವನಮೃತವ ಮಾಡಿ ? ಮಡದಿಯ ಜಂಗಮಕ್ಕೆ ಕೊಟ್ಟು ನೋಡಿದವರುಂಟೆ ? ಹಡೆದ ಮಕ್ಕಳ ಕೊಂದು ಜಂಗಮಕ್ಕೆ ಉಣಲಿಕ್ಕಿದರುಂಟೆ ? ನೀವು ಕೊಡುವುದು ಕೌತುಕವಲ್ಲ.ಶಂಭುಜಕ್ಕೇಶ್ವರಾ, ಎನ್ನೊಡೆಯನ ಸಾತ್ವಿಕ ಸದ್ಭಕ್ತರ ಮಹಿಮೆಗೆ ನಾನು ನಮೋ ನಮೋ ಎಂಬೆನು.