Index   ವಚನ - 19    Search  
 
ಭವಿಯ ಬೆರಸಿದ ಭಕ್ತಿ, ಹವಿಯ ಬೆರಸಿದ ಬೀಜ, ಉದಕ ಬೆರಸಿದ ಎಣ್ಣೆ ಜ್ಯೋತಿ ಪ್ರಜ್ವಲಿಸುವುದೆ ? ಭವಿಯಲ್ಲ ಭಕ್ತನಲ್ಲ, ಹವಿಯಲ್ಲ ಬೀಜವಲ್ಲ, ಉದಕವಲ್ಲ ಎಣ್ಣೆಯಲ್ಲ ಒಡಲಿಚ್ಫೆಗೆ ಹೋಗಿ ಭವಿಯ ಮನೆಗೆ ತುತ್ತಿಡುವ ನರಕಿಗಳಿಗೇಕೊಲಿವ ನಮ್ಮ ಶಂಭುಜಕ್ಕೇಶ್ವರನು .