ಮಂತ್ರ ಭಿನ್ನವಾಯಿತ್ತೆಂದು
ಕಂಥೆಯ ಬಿಡುವರೆ ಅರಿವುಳ್ಳವರು ?
ಅದು ದ್ವೇಷವಲ್ಲದೆ ಅರಿವಿಂಗೆ ಸಂಬಂಧವಲ್ಲ.
'ಮಂತ್ರ ಮಧ್ಯೇ ಭವೇಲ್ಲಿಂಗಂ ಲಿಂಗ ಮಧ್ಯೇ ಭವೇನ್ಮಂತ್ರಂ|
ಮಂತ್ರಲಿಂಗದ್ವಯೋರೈಕ್ಯಂ ಇಷ್ಟಲಿಂಗಂತು ಶಾಂಕರಿ ||'
ಎಂದುದಾಗಿ,
ಆ ಮಂತ್ರ ಸರ್ವರ ಆಧಾರ,
ಸರ್ವರ ಆತ್ಮಬೀಜವೆಂದರಿಯದೆ
ಕೇಸರಿಯ ಕನಸ ಕಂಡ ವಾರಣದಂತೆ,
ಈ ಭಾಷೆಹೀನರಿಗೇಕೆ ಶಂಭುಜಕ್ಕೇಶ್ವರನು.
Art
Manuscript
Music
Courtesy:
Transliteration
Mantra bhinnavāyittendu
kantheya biḍuvare arivuḷḷavaru?
Adu dvēṣavallade ariviṅge sambandhavalla.
'Mantra madhyē bhavēlliṅgaṁ liṅga madhyē bhavēnmantraṁ|
mantraliṅgadvayōraikyaṁ iṣṭaliṅgantu śāṅkari ||'
endudāgi,
ā mantra sarvara ādhāra,
sarvara ātmabījavendariyade
kēsariya kanasa kaṇḍa vāraṇadante,
ī bhāṣehīnarigēke śambhujakkēśvaranu.