Index   ವಚನ - 25    Search  
 
ವಿಶ್ವಾಸದಿಂದ ನಂಬಿದರಯ್ಯಾ ಭಿಲ್ಲಮರಾಯನವರು. ವಿಶ್ವಾಸದಿಂದ ನಂಬಿದರಯ್ಯಾ ಗೊಲ್ಲಾಳರಾಯನವರು. ವಿಶ್ವಾಸದಿಂದ ನಂಬಿದರಯ್ಯಾ ಕೆಂಭಾವಿಯ ಭೋಗಣ್ಣನವರು. ವಿಶ್ವಾಸದಿಂದ ನಂಬಿದರಯ್ಯಾ ಬಳ್ಳೇಶ್ವರ ಮಲ್ಲಯ್ಯಗಳು. ವಿಶ್ವಾಸದಿಂದ ನಂಬಿದರಯ್ಯಾ ಸಾಮವೇದಿಗಳು. ವಿಶ್ವಾಸದಿಂದ ನಂಬಿದರಯ್ಯಾ ದಾಸದುಗ್ಗಳೆಯವರು. ವಿಶ್ವಾಸದಿಂದ ನಂಬಿದರಯ್ಯಾ ಸಿರಿಯಾಳಚಂಗಳೆಯವರು. ವಿಶ್ವಾಸದಿಂದ ನಂಬಿದರಯ್ಯಾ ಸಿಂಧುಬಲ್ಲಾಳನವರು. ವಿಶ್ವಾಸದಿಂದ ನಂಬಿದರಯ್ಯಾ ಬಿಬ್ಬಿಬಾಚಯ್ಯಗಳು. ವಿಶ್ವಾಸದಿಂದ ನಂಬಿದರಯ್ಯಾ ಮರುಳಶಂಕರದೇವರು. ಇಂತಪ್ಪ ವಿಶ್ವಾಸಿಗಳ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನಯ್ಯಾ ಶಂಭುಜಕ್ಕೇಶ್ವರಾ.