Index   ವಚನ - 6    Search  
 
ನಾಲ್ಕು ವೇದಂಗಳು ಉಪಮೆ; ಹದಿನಾರು ಶಾಸ್ತ್ರಂಗಳು ಉಪಮೆ; ಹದಿನೆಂಟು ಪುರಾಣಂಗಳು ಉಪಮೆ; ಇಪ್ಪತ್ತೆಂಟು ಆಗಮಂಗಳು ಉಪಮೆ; ಮೂವತ್ತೆರಡು ಉಪನಿಷತ್ತುಗಳು ಉಪಮೆ; ಅನೇಕ ಶಬ್ದ, ಅನೇಕ ಶಾಸ್ತ್ರ, ಅನೇಕ ತರ್ಕವ್ಯಾಕರಣಗಳೆಲ್ಲ ಉಪಮೆ; ಅನೇಕ ಮಂತ್ರತಂತ್ರ ಸಿದ್ದಿಗಳು ಉಪಮೆ; ಚೌಷಷ್ಠಿ ವಿದ್ಯೆಂಗಳು ಉಪಮೆ; ಕಾಣದುದ ಕಾಬುದು ಉಪಮೆ; ಕೇಳದುದ ಕೇಳುವುದು ಉಪಮೆ; ಅಸಾಧ್ಯವ ಸಾಧಿಸುವುದು ಉಪಮೆ; ಸರಿಯಲ್ಲ, ಶರಣರು ಉಪಮಾತೀತರಯ್ಯ. ನಿಮ್ಮ ಶರಣನು ಒಕ್ಕುದ ಕೊಂಡುದರಿಂದ ನಾನು ನೀನು ಕೃತಾರ್ಥರಾದೆವು ಕಾಣಾ ಮಸಣ್ಣಯ್ಯಪ್ರಿಯ ಗಜೇಶ್ವರಾ