ಪರದಿಂದಲಾಯಿತ್ತು ಪರಶಕ್ತಿ.
ಪರಶಕ್ತಿಯಿಂದಲೊದಗಿದ ಭೂತಂಗಳು,
ಭೂತಂಗಳಿಂದಲೊದಗಿದ ಅಂಗ,
ಅಂಗಕ್ಕಾದ ಕರಣೇಂದ್ರಿಯಂಗಳು,
ಇಂದ್ರಿಯಂಗಳಿಂದಲೊದಗಿದ ವಿಷಯಂಗಳು.
ಆ ವಿಷಯಂಗಳ ಪರಮುಖಕ್ಕೆ
ತಾ ಶಕ್ತಿಯಾಗಿ ಭೋಗಿಸಬಲ್ಲಡೆ,
ಆತ ನಿರ್ಲೇಪ ಮಸಣಯ್ಯಪ್ರಿಯ ಗಜೇಶ್ವರಾ.
Art
Manuscript
Music
Courtesy:
Transliteration
Paradindalāyittu paraśakti.
Paraśaktiyindalodagida bhūtaṅgaḷu,
bhūtaṅgaḷindalodagida aṅga,
aṅgakkāda karaṇēndriyaṅgaḷu,
indriyaṅgaḷindalodagida viṣayaṅgaḷu.
Ā viṣayaṅgaḷa paramukhakke
tā śaktiyāgi bhōgisaballaḍe,
āta nirlēpa masaṇayyapriya gajēśvarā.