Index   ವಚನ - 10    Search  
 
ಸರ್ವಜನ ಸನುಮತವೆಂಬ ಮಾತು, ಸಾಮಾನ್ಯವೆ ಅವ್ವಾ ? ತಾ ಮೆಚ್ಚ; ಕಲಿಯಾಗಿಪ್ಪವರ ಕೆಲ ಮೆಚ್ಚ. ಸುಖಿಯಾಗಿಪ್ಪವರ ಒಬ್ಬರನಾದಡು ಕಾಣೆನವ್ವಾ. ತಾ ಸತ್ತು ಹೆರರ ಕೊಂದವಸ್ಥೆಯ ಚಂದವ ಚಂದ್ರಮತಿಯಲ್ಲಿ ಕಂಡೆನು. ಇಂದು ಕಂಡೆನು ಮಹಾಲಿಂಗ ಮಸಣಯ್ಯಗಳಲ್ಲಿ ಗಜೇಶ್ವರದೇವರು ಮಾಡಿತ್ತ.